ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರೊಬ್ಬರ ಜತೆಗೆ ಪ್ರಯಾಣಿಕ ವಿನಾಕಾರಣ ಜಗಳ ತೆಗೆದು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಲು ಯತ್ನಿಸಿದ ಘಟನೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ.
ವೀರಶೆಟ್ಟಿ ಧರ್ಮು ಎಂಬುವರೇ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರು ಎಂದು ದೂರಲಾಗಿದೆ. ಕಲಬುರಗಿಯ ಸೂಪರ್ ಮಾರ್ಕೇಟ್‌ನಿಂದ ಪಾಳಾಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಹತ್ತಿದ್ದ ವೀರಶೆಟ್ಟಿ, ತಾನು ಚಿಂಚೋಳಿಗೆ ಹೋಗಬೇಕು ಎಂದು ಪಟ್ಟು ಹಿಡಿದ. ಬಸ್ ಅಲ್ಲಿಗೆ ಹೋಗಲ್ಲ, ಇಲ್ಲಿ ಇಳಿದುಕೊಂಡು ಬೇರೆ ಬಸ್ ಹತ್ತಲು ಹೇಳಿದರೂ, ಕೇಳದೆ ಜಗಳ ತೆಗೆದು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಕುರಿತು ನಿರ್ವಾಹಕ ಶಾಂತಪ್ಪ ದೂರು ನೀಡಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.