ಬಳ್ಳಾರಿ: ಸಿಎಎ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬಳ್ಳಾರಿ ಸೇರಿ ವಿವಿಧೆಡೆ ಯಾರಾದರೂ ವಿರೋಧ ಮಾಡಿದರೆ ನಿಮ್ಮ ಕಥೆ ದೇವರೇ ಬಲ್ಲ ಎಂದು ನಗರ ಶಾಸಕ ಜಿ.ಸೋಮಶೇಖರರಡ್ಡಿ ಎಚ್ಚರಿಕೆ ನೀಡಿದ್ದಾರೆ.
ಇನ್ನ ಮೇಲೆಯಾದರೂ ನೆಟ್ಟಗೆ ಜೀವನ ಮಾಡಬೇಕು. ಏನಾದರೂ ಜಾಸ್ತಿ ನಕ್ರಾ ಮಾಡಿದರೇ ನಿಮ್ಮ ಪರಿಸ್ಥಿತಿ ಏನಾಗುತ್ತೆ ತಿಳಿದುಕೊಳ್ಳಿ, ಕಾಂಗ್ರೆಸ್ ಬೇಕುಬ್ ಗಳು ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೀವು ಶೇ.೧೫ರಷ್ಟು, ನಾವು ೮೫ರಷ್ಟು ಎಚ್ಚರವಿರಿ.
ಈ ದೇಶದಲ್ಲಿ ಇರಬೇಕಾದರೇ ನಮ್ಮ ಪದ್ದತಿ ಪ್ರಕಾರ ಇರಬೇಕು.ಹೆಚ್ಚಿಗೆ ನಕ್ರಾ ಮಾಡಿದ್ರೆ ನಿಮ್ಮ ದೇಶಕ್ಕೆ ಕಳಿಸೋ ವ್ಯವಸ್ಥೆ ಮಾಡ್ತಿವಿ ಅಂತ ಆಷ್ಟ್ರೇಲಿಯಾ ಪ್ರಧಾನಿ ಹಿಂದೊಮ್ಮೆ ತಮ್ಮ ದೇಶದಲ್ಲಿ ಅಲ್ಲಿನ ವಿರೋಧಿಗಳಿಗೆ ಹೇಳಿದ್ದರು.ಅದರಂತೆ ನಾವು ಮಾಡೋ ಪರಿಸ್ಥಿತಿ ತರೋ ರೀತಿ ಮಾಡಬೇಡಿ.ನಾವು ತಿರಗ ಬಿದ್ದರೇ ನೀವು ಉಳಿಯಲ್ಲ.ಇದು ನಿಮಗೆ ಎಚ್ಚರಿಕೆಯ ಗಂಟೆ.
ನಿಮಗೆ ಆಸೆಯಿದ್ದರೇ ನೀವು ಪಾಕಿಸ್ತಾನಕ್ಕೆ ಹೋಗಬಹುದು. ನಮಗೆ ಈಗಲೂ ನೀವು ಅಣ್ಣ- ತಮ್ಮಂದಿರರೇ, ಆದರೂ ನೀವು ನಕ್ರಾ ಮಾಡಿದರೆ ಒಬ್ಬೊಬ್ಬ ಹಿಂದು ಒಬ್ಬೊಬ್ಬ ಶಿವಾಜಿಯಾಗಿ ಖಡ್ಗ ಹಿಡಿದಿಕೊಂಡರೇ ನೀವ್ಯಾರು ಉಳಿಯಲ್ಲ.
ಪಂಚರ್ ಹಾಕೋರು ಕಾಯ್ದೆಗೆ ವಿರೋಧ ಮಾಡುತ್ತಾರೆ ಎಂದಿರುವ ಸಂಸದ ತೇಜಸ್ವಿ ಸೂರ್ಯಯವರ ಮಾತು ನಿಜ.ಇನ್ನೊಂದು ಸಾರಿ ನೀವು ನಮ್ಮ ಆಸ್ತಿಗಳಿಗೆ ನಷ್ಟ ಮಾಡಿದರೇ ನಿಮಗಿದೆ ಮಾರಿ ಹಬ್ಬ ಎಂದು ಶಾಸಕ ಸೋಮಶೇಖರರಡ್ಡಿ ಗುಡುಗಿದರು.
ಸಿಎಎ ಎಂದರೇ ನಿಮ್ಮಪ್ಪನ ಆಸ್ತಿ ಕಿತ್ತುಕೊಳ್ಳಲ್ಲ. ಪರದೇಶದಲ್ಲಿರುವ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದರಿಂದ ನಿಮಗೇನು ಹುಳ ಕಡಿಯುತ್ತಿದೆಯಾ…?
ಹೋಗೋದಾದ್ರೆ ಆ ದೇಶಕ್ಕೆ ಹೋಗಿ, ನಮಗಾದ್ರೆ ಪ್ಯಾಮಿಲಿ ಪ್ಲ್ಯಾನಿಂಗ್, ನಿಮಗಾದ್ರೆ ಇಲ್ಲ, ನಾವು ಕೂಡ ೫೦ ಮಕ್ಕಳನ್ನು ಹುಟ್ಟಿಸಿ ನಮ್ಮ ಜನಸಂಖ್ಯೆ ಜಾಸ್ತಿ ಮಾಡ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದರು.