ಸರ್‌ಸಿ.ವಿ.ರಾಮನ್‌ರ ೧೩೬ನೇ ಜನ್ಮದಿನಾಚರಣೆ
ಕಲಬುರಗಿ: ವಿಜ್ಞಾನ ಕ್ಷೇತ್ರದಲ್ಲಿ ‘ಬೆಳಕು’ ಮೂಡಿಸುವ ಮೂಲಕ ಸರ್.ಸಿ.ವಿ.ರಾಮನ್ ಇಡೀ ವಿಶ್ವವೇ ಭಾರತದೆಡೆೆಗೆ ತಿರುಗಿ ನೋಡುವ ಅದ್ಭುತ ಸಾಧನೆ ಮಾಡಿದ್ದಾರೆ. ಅವರ ಸಂಶೋಧನೆಯಾದ ‘ರಾಮನ್ ಪರಿಣಾಮ’ವು ಸಮುದ್ರದ ನೀಲಿ ಬಣ್ಣಕ್ಕೆ ಬೆಳಕಿನ ಚದುರುವಿಕೆಯ ಕಾರಣವೆಂದು ತೋರಿಸಿತು. ಈ ಸಂಶೋಧನೆಗೆ ವಿಶ್ವದ ಶ್ರೇಷ್ಠ ಪ್ರಶಸ್ತಿಯಾದ ನೋಬಲ್ ಪಾರಿತೋಷಕವನ್ನು ೧೯೩೦ರಲ್ಲಿ ಪಡೆದು ನಮ್ಮ ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿದರು. ‘ಏಷ್ಯಾ ಖಂಡದಲ್ಲಿಯೇ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ’ ಎಂಬ ಹೆಗ್ಗಳಿಕೆ ಇವರದಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಗೋವಾ ಹೋಟೆಲ್ ಹತ್ತಿರವಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಸರ್ ಸಿ.ವಿ.ರಾಮನ್‌ರ ೧೩೬ನೇ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಯಾವುದೇ ರಾಷ್ಟçದ ಅಭಿವೃದ್ದಿ, ಆ ರಾಷ್ಟçದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಮೇಲೆ ನಿಂತಿದೆ. ರಷ್ಯಾ, ಅಮೇರಿಕ ಸೇರಿದಂತೆ ಮುಂತಾದ ಸುಪರ್ ಪವರ್ ರಾಷ್ಟçಗಳು ಇಂದು ಆ ಮಟ್ಟಕ್ಕೆ ಬೆಳೆಯಬೇಕಾದರೆ, ಆ ರಾಷ್ಟçದಲ್ಲಿ ವಿಜ್ಞಾನ ಉತ್ತಂಗ ಶಿಖರವನ್ನು ತಲುಪಿದೆ. ನಮ್ಮ ದೇಶದ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸಿ.ವಿ.ರಾಮನ್‌ರು ಅವಿಸ್ಮರಣೀಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಡಾ.ಸಂದೀಪ ಪ್ರಭು, ನಿಲೋಫರ್ ಶೇಖ್, ಶೀತಲ್, ಅರುಣಕುಮಾರ, ರೋಹಿತ್, ರಾಹುಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.