ಜಿಲ್ಲೆ

ಸಚಿವ ಶಿವರಾಜ ತಂಗಡಗಿ ತಿರುಗೇಟು; ಸಿ.ಟಿ. ರವಿಯವರೇ ಟೆನ್ಶನ್ ತಗೋಬೇಡಿ

ಧಾರವಾಡ: `ಸಿ.ಟಿ. ರವಿಯವರೇ ಟೆನ್ಶನ್ ತಗೋಬೇಡಿ. ಸರ್ಕಾರ ಬಂದ ಬಳಿಕ ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದೇವೆ. ಒಂದೆರಡು ವರ್ಷ ಸಮÁಧಾನದಿಂದ ಇರಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದರು.
ಲೋಡ್ ಶೆಡ್ಡಿಂಗ್ ಬಗ್ಗೆ ಸಿ.ಟಿ. ರವಿ ಆರೋಪಿಸಿರುವ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಆಗಿಲ್ಲ. ಅಣೆಕಟ್ಟೆಗಳು ತುಂಬಿಲ್ಲ. ಹೀಗಾಗಿ ಲೋಡ್ ಶೆಡ್ಡಿಂಗ್ ಸಹಜ. ವಾಸ್ತವ ತಿಳಿದುಕೊಂಡು ಮÁತನಾಡುವುದು ಯೋಗ್ಯ. ಮನಸ್ಸಿಗೆ ಬಂದAತೆ ಮÁತನಾಡಬಾರದು. ಒಂದೆರಡು ಸಲ ಲೋಡ್ ಶೆಡ್ಡಿಂಗ್ ಆದ ತಕ್ಷಣ ಸರ್ಕಾರವನ್ನು ಹೊಣೆ ಮÁಡುವುದು ಸರಿಯಲ್ಲ ಎಂದರು.

  • ಹಿಂದೆ ಆಪರೇಶನ್ ಮಾಡಿಲ್ಲವೇ?:
    ಅಪರೇಶನ್ ಹಸ್ತಕ್ಕೆ ನವರಂಗಿ ಆಟ ಎಂಬ ಸಿ.ಟಿ. ರವಿ ಆರೋಪಕ್ಕೆ ತಿರುಗೇಟಿ ನೀಡಿದ ಸಚಿವ ಶಿವರಾಜ ತಂಗಡಗಿ, ಅವರು ಹಿಂದೆ ಅಪರೇಶನ್ ಮÁಡಿಲ್ಲವೇ? ಆಗ ನಾಚಿಕೆ, ನವರಂಗಿ ಕಾಣಲಿಲ್ಲವೇ?. ನಮಗೆ ಸರ್ಕಾರ ಬೀಳುತ್ತದೆಂಬ ಚಿಂತೆ ಇಲ್ಲ. ಬಿಜೆಪಿಯಲ್ಲಿದ್ದರೆ ಮುಂದೆ ಏನೂ ಆಗುವುದಿಲ್ಲ ಎಂಬುದು ಗೊತ್ತಾಗಿ ಶಾಸಕರೇ ನಮ್ಮಲ್ಲಿ ಬರುತ್ತಿದ್ದಾರೆ. ನಮ್ಮ ತತ್ವ, ಸಿದ್ಧಾಂತ ಒಪ್ಪಿ ಎಷ್ಟು ಜನ ಬರುತ್ತಾರೋ ಗೊತ್ತಿಲ್ಲ ಎಂದರು.