ಕೆ.ಆರ್.ನಗರ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಪಟ್ಟಣದ ಕಂಠೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎನ್.ಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಎನ್.ಸ್ವಾಮಿ ಮಾತನಾಡಿ, ಶಾಸಕ ಡಿ.ರವಿಶಂಕರ್ ಅವರ ಮಾರ್ಗದರ್ಶನ, ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ಶಿಕ್ಷಕರ ಸಹಕಾರದಿಂದ ಸಂಘದ ಬಲವರ್ಧನೆಗೆ ಕೆಲಸ ಮಾಡುತ್ತೇನೆ ಎಂದರು.
ಸಿ.ಎನ್.ಸ್ವಾಮಿ ಅವರನ್ನು ಸಾರಮಸ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಪುರುಷೋತ್ತಮ್, ನಿಕಟ ಪೂರ್ವ ಅಧ್ಯಕ್ಷ ಸಿ.ಎನ್.ಪ್ರಭು, ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸೈಯದ್‌ರಿಜ್ವಾನ್, ಶಿಕ್ಷಕ ಸಂಘದ ಗೌರವ ಸಲಹೆಗಾರ ರಾಜಶೇಖರ್, ಪದಾಧಿಕಾರಿಗಳಾದ ಕೃಷ್ಣನಾಯಕ್, ಒಂಟಿಮನೆ ನಾಗರಾಜು, ಬಿ.ವಿ.ಪ್ರಸನ್ನಕುಮಾರ್, ಮಂಜುರಾಜ್, ಗೋವಿಂದರಾಜ್, ಮುತ್ತೇಶಾಚಾರ್, ಮಹದೇವಸ್ವಾಮಿ, ದೇವರಾಜೇಗೌಡ, ಖಾದೀರ್, ಮಂಜುನಾಥ್, ರವಿ ಇತರರು ಅಭಿನಂದಿಸಿದರು.