ಜಿಲ್ಲೆ

ಚಿಟ್ಟೇನಹಳ್ಳಿ ಸಹಕಾರ ಸಂಘಕ್ಕೆ ಸಿ.ಎನ್.ರವಿ ಅಧ್ಯಕ್ಷ

ಪಿರಿಯಾಪಟ್ಟಣ: ತಾಲೂಕಿನ ಚಿಟ್ಟೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಎನ್.ರವಿ ಮತ್ತು ಉಪಾಧ್ಯಕ್ಷರಾಗಿ ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಮಂಗಳವಾರ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿ.ಎನ್.ರವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಗದೀಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಿಡಿಒ ಹಿತೇಂದ್ರ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಸಿ.ಎನ್.ರವಿ ಮಾತನಾಡಿ, ರೈತರ ಜೀವನಾಡಿಯಾಗಿರುವ ಸಹಕಾರ ಸಂಘಗಳು ಸಕಾಲಕ್ಕೆ ಸರಿಯಾಗಿ ಅಗತ್ಯ ಸಾಲ ಸೌಲಭ್ಯ ಹಾಗೂ ಕೃಷಿ ಸಲಕರಣೆಗಳನ್ನು ನೀಡಿ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರು ನಿರ್ದೇಶಕರ ಬೆಂಬಲದಲ್ಲಿ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತದೆ ಎಂದರು.

ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಿಇಒ ಅಭಿಷೇಕ್, ನಿರ್ದೇಶಕ ಜಿ.ಎನ್.ನಾಗರಾಜ್, ಸ್ವಾಮಿಗೌಡ, ದಿನೇಶ್, ನಾಗು, ಆಶಾ, ತಮ್ಮೇಗೌಡ, ಚಂದ್ರನಾಯ್ಕ, ಜಯರಾಂ, ಮಲ್ಲಿಕಾರ್ಜನ್, ಸಿ.ಟಿ.ರವಿಕುಮಾರ್, ತಾ.ಪಂ. ಮಾಜಿ ಸದಸ್ಯ ಶಿವಶಂಕರ್, ಸಿ.ಕೆ.ನಾಗರಾಜು, ರಾಜು, ತಿಮ್ಮಪ್ಪ ಚನ್ನೇನಹಳ್ಳಿ ಸಿ.ಎಸ್ ರಾಜೇಗೌಡ, ರಾಜು, ಹರೀಶ್, ತಿಮ್ಮೇಗೌಡ, ಪ್ರದೀಪ್ ಇತರರು ಇದ್ದರು.