ಮೈಸೂರು: ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಫ್ ಆಫ್ ಜ್ಯುವೆಲರ್ಸ್ ವತಿಯಿಂದ ನಗರದ ಬನ್ನಿಮಂಟಪದ ಗ್ರಾೃಂಡ್ ಮರ್ಕ್ಯೂರ್ ಹೋಟೆಲ್‌ನ ದಿ ರೀಜೆಂಟ್ ಹಾಲ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ವಿಶೇಷ ಆಭರಣ ಪ್ರದರ್ಶನಕ್ಕೆ ಚಾಲನೆ ದೊರೆಯಿತು.
ಆಭರಣ ಪ್ರದರ್ಶನವನ್ನು ನಟಿ ರಾಧ್ಯಾ ಉದ್ಘಾಟಿಸಿ ಶುಭಕೋರಿದರು. ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಫ್ ಆಫ್ ಜ್ಯುವೆಲರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ತೇಜಸ್ ಕಲ್ರಾ, ಅಧಿಕಾರಿಗಳಾದ ಗೋಪಾಲ್, ಶ್ರೀ ಚರಣ್ ಇನ್ನಿತರರಿದ್ದರು.
ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸಗಳ ವಿಶಿಷ್ಟ ಶ್ರೇಣಿಯ ಸಂಗ್ರಹಗಳೊಂದಿಗೆ ಅಸಾಧಾರಣ ಆವರಣ ಪ್ರದರ್ಶನವು ಗ್ರಾಹಕರನ್ನು ಕೈಬಿಸಿ ಕರೆಯುತ್ತಿದೆ.
ಗ್ರಾಹಕರಿಗಾಗಿ 2,469 ವಿಶೇಷ ಕೊಡುಗೆ ನೀಡುತ್ತಿದ್ದು, ಬೆಳ್ಳಿಯ ಮೇಲೆ ಶೇ.2, ಚಿನ್ನದ ಮೇಲೆ ಶೇ.4, ವಜ್ರದ ಮೇಲೆ ಶೇ.6, 18.69 ಲಕ್ಷ ರೂ. ಮೇಲ್ಪಟ್ಟ ಖರೀದಿಗೆ ಶೇ.9ರಷ್ಟು ರಿಯಾಯಿತಿ ಕೊಡಲಾಗುತ್ತಿದೆ. ಇದು ಜೂ.24ರವರೆಗೆ ಮಾತ್ರ ಇರಲಿದೆ. ಅಪರೂಪದ ಸುಗಂಧಗಳ ಡಿಸ್ಕವರಿ ಕಿಟ್ ಮತ್ತು ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ. ಗ್ರಾಹಕರು ಈ ಪ್ರದರ್ಶನಕ್ಕೆ ಒಮ್ಮೆ ಭೇಟಿ ನೀಡಬಹುದು.
ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್‌ನಿಂದ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವು ವಿಶೇಷ ಎನಿಸಿದ್ದು, ಸಂಸ್ಥೆಯ ಅತ್ಯಂತ ಆಕರ್ಷಕ ಆಭರಣಗಳು ಇಲ್ಲಿವೆ. ಶುದ್ಧ ಚಿನ್ನ, ರತ್ನಗಳು ಹಾಗೂ ಅತ್ಯುತ್ತಮವಾದ ಕರಕುಶಲತೆಯೊಂದಿಗೆ ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹ ಪ್ರದರ್ಶನ ಇದಾಗಿದೆ.
ಸಂಸ್ಥೆಯ ಆಭರಣ ಸಂಗ್ರಹಗಳು ವೈಢೂರ್ಯ, ಸಿಟ್ರಿನ್, ಮುತ್ತುಗಳು, ನೀಲ, ಮಾಣಿಕ್ಯಗಳಂತಹ ಅಪರೂಪದ ವಜ್ರಗಳ ಸೂಕ್ಷ್ಮ ವಿನ್ಯಾಸಗಳೊಂದಿಗೆ ಸೊಬಗು ಮತ್ತು ಕ್ಲಾಸಿಕ್ ಶೈಲಿಯ ಸಮ್ಮಿಲನವಾಗಿವೆ. ಲ್ಯಾಬ್ ಗ್ರೋನ್ ಡೈಮಂಡ್ಸ್ ಪ್ರಮುಖ ಆಕರ್ಷಣೆಯಾಗಿದೆ. ಕೈಗೆಟುಕುವ ಮತ್ತು ಸೊಗಸಾದ ಬೆಳ್ಳಿ ಆಭರಣಗಳು 599 ರೂ. ಬೆಲೆಯೊಂದಿಗೆ ಪ್ರಾರಂಭವಾಗುತ್ತವೆ.
ಕ್ಲಾಸಿಕ್ ಕಲೆಕ್ಷನ್ ಒಂದು ಜನಪ್ರಿಯ ಆಭರಣವಾಗಿದೆ. ಸಾಮಾನ್ಯ ಉಡುಗೆಗಾಗಿ ದೊಡ್ಡ ಗಾತ್ರದ ಆಭರಣಗಳು ದೊರೆಯುತ್ತದೆ. ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಫ್ಯಾಷನ್ ಜಗತ್ತಿನಲ್ಲಿ ಉತ್ತಮ ಸಂಗ್ರಹವನ್ನು ಅನಾವರಣಗೊಳಿಸಿದೆ. ಕ್ಲಾಸಿಕ್ ಸಂಗ್ರಹದ ಸೊಬಗು ಗ್ರಾಹಕರ ಗಮನ ಸೆಳೆಯುತ್ತದೆ. ಕ್ಲಾಸಿ ವಿನ್ಯಾಸಗಳು ಮತ್ತು ಸಮಕಾಲೀನ ಸೌಂದರ್ಯಶಾಸ್ತ್ರದಿಂದ ಸ್ಫೂರ್ತಿ ಪಡೆದ ಆಭರಣಗಳಾಗಿವೆ.
ಶೈಲಿ ಮತ್ತು ಫ್ಯಾಷನ್ ಅನ್ನು ಅನ್ವೇಷಿಸಲು ಉತ್ಸುಕರಾಗಿರುವ ಪ್ರತಿಯೊಬ್ಬ ಮಹಿಳೆಗೆ ಇಲ್ಲಿಯ ಸಂಗ್ರಹವು ಅತ್ಯಾಧುನಿಕ ಆಭರಣ ಶ್ರೇಣಿಯನ್ನು ಒದಗಿಸುತ್ತದೆ. ಪ್ರತಿಯೊಂದೂ ಆಭರಣವು ಆಕರ್ಷಕ ಕಥೆಯನ್ನು ಹೊಂದಿದ್ದು, ಸರಳತೆ, ತಾಜಾತನ ಮತ್ತು ಸ್ಪಷ್ಟತೆಯ ಮೌಲ್ಯಗಳಿಂದ ಸ್ಫೂರ್ತಿ ಪಡೆದಿದೆ. ಕೊಡುಗೆ, ಆಭರಣ ಸಂಗ್ರಹದ ಕುರಿತು ಮಾಹಿತಿಗಾಗಿ ಮೊ:9740018421, 9000118427 ಸಂಪರ್ಕಿಸಬಹುದು.