ಹೊಸನಗರ: ಪಟ್ಟಣದಲ್ಲಿ ಇಂದಿರಾಗಾಂಧಿ ವಸತಿ ಶಾಲೆಗೆ ಸಂಸದ ಬಿ.ವೈ.ರಾಘವೇಂದ್ರ ದಿಢೀರ್ ಭೇಟಿ ನೀಡಿ, ಅಲ್ಲಿಯ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಬೆರೆತರು. ಭಾನುವಾರ ನಗರ ಪ್ರವಾಸದಲ್ಲಿದ್ದ ವೇಳೆ ಮಾರ್ಗ ಮಧ್ಯದ ಹೊಸನಗರ ಕೆಇಬಿ ಸರ್ಕಲ್ ಮುಂಭಾಗದ ಇಂದಿರಾಗಾಂಧಿ ವಸತಿ ಶಾಲೆಗೆ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ನಿಲಯ ಸ್ಥಿತಿಗತಿಯನ್ನು ಅವಲೋಕಿಸಿದರು. ಮಕ್ಕಳ ಚುರುಕುತನವನ್ನು ಶ್ಲಾಘಿಸಿದರು. ಸದರಿ ಶಾಲೆಯ ಹೊಸ ಕಟ್ಟಡ ಗೇರುಪುರದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಕಾಮಗಾರಿ ವಿಳಂಬದ ಬಗ್ಗೆ ಸಂಸದರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಗಮನಹರಿಸುವ ಭರವಸೆ ನೀಡಿದರು.