ಮಲ್ಲಾಪುರದ ಶ್ರೀ ಗುಡ್ಡದಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಉತ್ಸವ ಮೂರ್ತಿ ಪಲ್ಲಕ್ಕಿ ಹೊತ್ತು ಭಕ್ತಿ ಸಮರ್ಪಿಸಿದ ಸಂಸದ ಬಿ.ವೈ.ರಾಘವೇಂದ್ರ. ಡಿ.ಮಂಜುನಾಥ್, ಸದಾಶಿವಪ್ಪ ಗೌಡ ಇತರರಿದ್ದರು. 
ಜಿಲ್ಲೆ

ಬಿವೈಆರ್ ಪಲ್ಲಕ್ಕಿ ಸೇವೆ

Shivamogga - Desk - Megha MS

ಹೊಳೆಹೊನ್ನೂರು: ಮಲ್ಲಾಪುರದ ಶ್ರೀ ಗುಡ್ಡದ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಆಶೀರ್ವಾದ ಪಡೆದರು. ಮಂಗಳವಾರ ಕೆಂಡಾರ್ಚನೆ ಪ್ರಯುಕ್ತ ಜಾತ್ರೆಗೆ ಆಗಮಿಸಿದ ಸಂಸದರು ಮಲ್ಲೇಶ್ವರ ಸ್ವಾಮಿ ಪಲ್ಲಕ್ಕಿ ಹೊತ್ತು ಭಕ್ತಿ ಸಮರ್ಪಿಸಿದರು. ನಂತರ ಕೆಂಡಾರ್ಚನೆಯಲ್ಲಿ ಪಾಲ್ಗೊಂಡು ಸ್ವಾಮಿ ದರ್ಶನ ಮಾಡಿ ಮಾತನಾಡಿ, ದೇವಸ್ಥಾನದ ಸಮುದಾಯ ಭವನಕ್ಕೆ ಅನುದಾನ ನೀಡಿದ್ದನ್ನು ಸ್ಮರಿಸಿದರು. ಸೇವಾ ಸಮಿತಿ ಹಾಗೂ ಗ್ರಾಮಸ್ಥರ ಒಗ್ಗಟಿನಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಭವ್ಯ ಭವನ ನಿರ್ಮಾಣವಾಗಿದೆ. ಪ್ರತಿ ಬಾರಿ ಈ ಭಾಗಕ್ಕೆ ಭೇಟಿ ನೀಡಿದಾಗ ಮಲ್ಲಾಪುರದ ಗುಡ್ಡದ ಮಲ್ಲೇಶ್ವರ ಸ್ವಾಮಿ, ಆನವೇರಿಯ ಶಕ್ತಿ ದೇವತೆ ಹಿರಿಮಾವುರದಮ್ಮನ ಆಶೀರ್ವಾದ ಪಡೆಯುವುದನ್ನು ಮರೆಯುವುದಿಲ್ಲ ಎಂದರು. ಮಂಡಲ ಅಧ್ಯಕ್ಷ ಮಲ್ಲೇಶ್, ಮಾಜಿ ಅಧ್ಯಕ್ಷ ಡಿ.ಮಂಜುನಾಥ್, ಜಿಲ್ಲಾ ಕಮಿಟಿ ಸದಸ್ಯ ಬಾಳೋಜಿ ಬಸವರಾಜ್, ಮಾಜಿ ತಾಪಂ ಸದಸ್ಯ ಸದಾಶಿವಪ್ಪ ಗೌಡ, ಎಸ್.ಶ್ರೀನಿವಾಸ್, ಜಯಪ್ಪ, ಈಶ್ವರ ರಾವ್, ಲಕ್ಷ್ಮಣಪ್ಪ, ಪರಮೇಶ್ವರಪ್ಪ ಅಕ್ಕಿಮಟ್ಟಿ ಜಗದೀಶ್, ನಾಗೇಶ್ವರಾವ್ ಇತರರಿದ್ದರು.