ಜಿಲ್ಲೆ

ಅಥಣಿಗೂ ಬೈಪಾಸ್ ರಸ್ತೆ ಸೌಲಭ್ಯ

ವಿದ್ಯಾ ಶೆಟ್ಟನಗೌಡ್ರ

ಅಥಣಿ: ಪಟ್ಟಣದಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಹುಕ್ಕೇರಿ ಹಾಗೂ ಗೋಕಾಕ ಮಾದರಿಯಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ಉದ್ದೇಶವಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸ್ಥಳೀಯ ಪ್ರವಾಸಿಮಂದಿರದಲ್ಲಿ ಸೋಮವಾರ ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಶೀಘ್ರ ಪೊಲೀಸ್ ಸಿಬ್ಬಂದಿ ನೇಮಕಾತಿ ನಡೆಸಲಿದೆ. ಸ್ಥಳೀಯ ಠಾಣೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲಾಗುವುದು. ಅಲ್ಲದೆ ಗ್ರಾಮಾಂತರ ಠಾಣೆ ಆರಂಭಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಮೌಢ್ಯ ವಿರೋಧಿ ಜಾಗೃತಿ ಬೇಕು: ತಾಲೂಕಿನ ಅನಂತಪುರ ಗ್ರಾಮದ ರಾಮಪಾಲ ಮಹಾರಾಜರ ಭಕ್ತರ ಪ್ರಕರಣದ ಕುರಿತು ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸಿ ಮೌಢ್ಯ ತೊಡೆಯಬೇಕಿದೆ ಎಂದರು.  ಸದ್ಯ ಡಿಸಿಸಿ ಬ್ಯಾಂಕ್ ಚುನಾವಣೆ ಅಭ್ಯರ್ಥಿಗಳು ಪ್ರಚಾರ ಸಿದ್ಧತೆ ಮಾಡುತ್ತಿದ್ದು, ವೈಯಕ್ತಿಕ ಸಾಧನೆ, ಸಹಕಾರ ರಂಗದ ಸೇವೆ ಮೂಲಕ ಆಯ್ಕೆಯಾಗುತ್ತಾರೆ, ಇದರಲ್ಲಿ ರಾಜಕೀಯವಿಲ್ಲ. ನಮ್ಮ ಪೆನಲ್‌ಗೆ ಜಯ ಖಚಿತವೆಂದರು.

ಅಥಣಿ ತಾಲೂಕಿನ ಹಲವು ಪಿಕೆಪಿಎಸ್‌ಗಳಿಗೆ ಸರಿಯಾಗಿ ಸಾಲ ಬಿಡುಗಡೆಯಾಗದಿರುವ ಸಮಸ್ಯೆ ಶೀಘ್ರ ಸರಿಪಡಿಸಲಾಗವುದು ಎಂದರು.

ತಹಸೀಲ್ದಾರ್ ಸಿದರಾಯ ಭೋಸಗಿ, ತಾಪಂ ಇಒ ಶಿವಾನಂದ ಕಲ್ಲಾಪುರ, ಬಿಇಒ ಎಂ.ಆರ್.ಮುಂಜೆ ಇತರರಿದ್ದರು.