ಗಂಗೊಳ್ಳಿ: ಇಲ್ಲಿನ ರೋಟರಿ ಕ್ಲಬ್ ಆತಿಥ್ಯದಲ್ಲಿ ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ರೋಟರಿ ವಲಯ-1ರ ಸಾಂಸ್ಕೃತಿಕ ಉತ್ಸವ- 2024 ಗಂಗಾತರಂಗದ ಸ್ಪರ್ಧೆಗಳಲ್ಲಿ ಬೈಂದೂರು ರೋಟರಿ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಭಾವಗೀತೆಯಲ್ಲಿ ಪೂರ್ಣಿಮಾ ವಿಷ್ಣು ಪೈ ಪ್ರಥಮ, ಚಿತ್ರಗೀತೆಯಲ್ಲಿ ಜತೀಂದ್ರ ಮರವಂತೆ ತೃತೀಯ, ಯುಗಳ ಗೀತೆಯಲ್ಲಿ ಪೂರ್ಣಿಮಾ ವಿಷ್ಣು ಪೈ ಮತ್ತು ರಾಘವೇಂದ್ರ ಪ್ರಥಮ, ಏಕಪಾತ್ರಾಭಿನಯದಲ್ಲಿ ನಾಗೇಂದ್ರ ಬಂಕೇಶ್ವರ ತೃತೀಯ ಪ್ರಶಸ್ತಿ ಗಳಿಸಿದರು. ಏಕವ್ಯಕ್ತಿ ನೃತ್ಯದಲ್ಲಿ ನಿಧಿ ನಾಗೇಂದ್ರ ದ್ವಿತೀಯ, ಗುಂಪು ನೃತ್ಯದಲ್ಲಿ ಪ್ರಥಮ, ಪ್ರಹಸನದಲ್ಲಿ ತೃತೀಯ, ಚಿತ್ರಕಲೆಯಲ್ಲಿ ಸ್ಕಂದರಾಮ್ ಪ್ರಥಮ ಬಹುಮಾನ ಪಡೆಯುವ ಮೂಲಕ ಬೈಂದೂರು ರೋಟರಿ ಕ್ಲಬ್ ಎಂಟು ಸ್ಪರ್ಧೆಗಳಲ್ಲಿ ಹೆಚ್ಚು ಅಂಕ ಪಡೆದು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಲಾ ತಾಂಡೇಲ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಆನಂದ್ ಸಿ.ಕುಂದರ್ ಮತ್ತು ರೋಟರಿ ಜಿಲ್ಲಾ ಗವರ್ನರ್ ಸಿಎ ದೇವ್‌ಆನಂದ್ ವಿಜೇತರಿಗೆ ಬಹುಮಾನ ವಿತರಿಸಿದರು. ಸಹಾಯಕ ಗವರ್ನರ್ ಡಾ.ಬಿ.ರಾಜೇಂದ್ರ ಶೆಟ್ಟಿ, ಪ್ರಮುಖರಾದ ಜಯಪ್ರಕಾಶ್ ಶೆಟ್ಟಿ, ಉಮೇಶ್ ಮೇಸ್ತ, ರೇಖಾ ದೇವ್‌ಆನಂದ್, ಶಶಿಧರ ಶೆಟ್ಟಿ, ಪ್ರದೀಪ್ ಡಿ.ಕೆ., ವೆಂಕಟೇಶ್ ನಾವುಂದ, ಮಹೇಂದ್ರ ಶೆಟ್ಟಿ, ಮಾಲಾಶ್ರೀ, ಮೋಹನ್ ರೇವಣ್ಕರ್, ಐ.ನಾರಾಯಣ್, ಪ್ರಸಾದ್ ಪ್ರಭು, ಉದಯ ಆಚಾರ್, ಡಾ.ಪ್ರವೀಣ್ ಶೆಟ್ಟಿ, ಸುಧಾಕರ ಪಿ., ಮಂಜುನಾಥ ಮಹಾಲೆ, ಶಾರದಾ ನಾರಾಯಣ, ಸುನೀಲ್ ಎಚ್.ಜಿ. ಉಪಸ್ಥಿತರಿದ್ದರು.