oppo_0 
ಜಿಲ್ಲೆ

ಇ ಸ್ವತ್ತು ಪ್ರಮಾಣ ಪತ್ರ ವಿತರಣೆ

ಎ. ಆರ್. ರಘುರಾಮ

ಬೈಲುಕುಪ್ಪೆ : ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಹೊನ್ನೂರು ಗ್ರಾಮದಲ್ಲಿ ನಿವಾಸಿಗಳಿಗೆ ಇ ಸ್ವತ್ತು ಪ್ರಮಾಣ ಪತ್ರವನ್ನು ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ಮಂಗಳವಾರ ವಿತರಿಸಿದರು.

ಪಂಚಾಯಿತಿ ವತಿಯಿಂದ 25 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಈ ಬಗ್ಗೆ ಬೇಡಿಕೆ ಇಟ್ಟಿದ್ದರು. ಅಂದು ನೀಡಿದ ಭರವಸೆಯಂತೆ ಗ್ರಾಮ ಪಂಚಾಯಿತಿ ಒಪ್ಪಿಗೆ ಮೇರೆಗೆ ಈ ಸ್ವತ್ತು ಪ್ರಮಾಣ ಪತ್ರ ನೀಡಿದ್ದೇವೆ ಎಂದರು. ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿಗೆ ಸ್ಪಂದಿಸುವುದಾಗಿ ಅವರು ಹೇಳಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೋರೇಗೌಡ ಮಾತನಾಡಿ ಈ ಭಾಗದ ಜನರು ಹಲವು ವರ್ಷಗಳಿಂದ ಈ ಸ್ಥಳದಲ್ಲಿ ವಾಸವಾಗಿದ್ದಾರೆ. ಡಿಮ್ಯಾಂಡ್ ದಾಖಲೆಗಳನ್ನು ಮಾತ್ರ ಹೊಂದಿದ್ದರು.ವಾಸ ಸ್ಥಳಕ್ಕೆ ಇ ಸ್ವತ್ತು ಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅದನ್ನು ಇಂದು ವಿತರಣೆ ಮಾಡಲಾಗಿದೆ ಎಂದರು. ಗ್ರಾಪಂ ಅಧ್ಯಕ್ಷ ರಘು, ಉಪಾಧ್ಯಕ್ಷೆ ಎಲಿಜಬೆತ್ ಮತ್ತು ಸದಸ್ಯರು ಹಾಜರಿದ್ದರು.