ಜಿಲ್ಲೆ

ಬೈಕ್ ಡಿಕ್ಕಿ ಓರ್ವ ಸಾವು

ರಮೇಶ ಮೇಳಕುಂದಾ

ಚಿತ್ತಾಪುರ: ಮಾಡಬೂಳ ಕ್ರಾಸ್ ಹತ್ತಿರ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಪರಿಣಾಮ ಸ್ಥಳದಲ್ಲೆ ಓರ್ವ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ದಂಡೋತಿ ಗ್ರಾಮದ ಪ್ರಕಾಶ (೨೪ ) ಮೃತಪಟ್ಟವ. ದಂಡೋತಿ ಗ್ರಾಮದಿಂದ ಚಿತ್ತಾಪುರಕ್ಕೆ ಬರುವಾಗ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.