ಜಿಲ್ಲೆ

ByElections 2024: ಚನ್ನಪಟ್ಟಣದಲ್ಲಿ ಬೊಂಬೆಯಾಟ; ನಿಖಿಲ್-ಸಿಪಿವೈ ನಡುವೆ ಗೆಲುವಿನ ಉಯ್ಯಾಲೆ!

ಮೋಹನ್​ ಶೆಟ್ಟಿ

ರಾಮನಗರ:ನ್ನಪಟ್ಟಣ ಉಪಚನಾವಣೆಯ (ByElections 2024) ಮೊದಲ ಹಂತದ ಮತ ಎಣಿಕೆ ಪ್ರಕ್ರಿಯೆಯಲ್ಲಿ ‘ಕೈ’ ಅಭ್ಯರ್ಥಿ ಸಿಪಿ ಯೋಗೇಶ್ವರ್​ ಹಿನ್ನಡೆ ಅನುಭವಿಸಿದ್ದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಆರಂಭಿಕ ಮುನ್ನಡೆ ಪಡೆದುಕೊಂಡರು. ಈ ಲೆಕ್ಕಾಚಾರ ಎರಡನೇ ಸುತ್ತಿನಲ್ಲಿ ಬದಲಾಯಿತು. ದ್ವಿತೀಯ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಸಿಪಿವೈ ಇದೀಗ 6ನೇ ಸುತ್ತಿನಲ್ಲೂ ಭಾರೀ ಹಿನ್ನಡೆ ಎದುರಿಸಿದ್ದಾರೆ.

6ನೇ ಸುತ್ತಿನಲ್ಲಿ ನಿಖಿಲ್ ಮುನ್ನುಗುತ್ತಿದ್ದು, 780 ಮತಗಳಿಂದ ಮೈತ್ರಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆ 6ನೇ ಸುತ್ತು ಮತಗಳು 1. ನಿಖಿಲ್ - 30,674

2 . ಸಿ.ಪಿ. ಯೋಗೇಶ್ವರ್ - 29891

ಮುನ್ನಡೆ - 783 ( - 524 ಹಿಂದಿನ ಮುನ್ನಡೆ)*

8ನೇ ಸುತ್ತಿನಲ್ಲಿ 11,178 ಮತಗಳಿಂದ ಸಿಪಿವೈ ಭಾರೀ ಮುನ್ನಡೆ ಸಾಧಿಸಿದ್ದು, ಈ ಅಂತರ ನಿಖಿಲ್​ಗೆ​ ದೊಡ್ಡ ಆಘಾತ ತಂದೊಡ್ಡಿದೆ.