ಜಿಲ್ಲೆ

ಬ್ಯಾಡಗಿಯಲ್ಲಿ ಕುಡಿಯುವ ನೀರು ಪೂರೈಕೆ 3 ದಿನ ಸ್ಥಗಿತ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಬ್ಯಾಡಗಿ: ಪಟ್ಟಣದ ನಾಗರಿಕರಿಗೆ ಅ. 28 ರಿಂದ 30ರವರೆಗೆ ಮೂರು ದಿನಗಳ ಕಾಲ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ತಿಳಿಸಿದ್ದಾರೆ. ಪ್ರಕಟಣೆ ನೀಡಿರುವ ಅವರು, ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಮುದೇನೂರು ಹಾಗೂ ಮಾರ್ಗ ಮಧ್ಯೆ ಒಡೆದಿದ್ದು, ದುರಸ್ತಿ ಕಾರ್ಯ ನಡೆದಿದೆ. ಹೀಗಾಗಿ, 3 ದಿನ ನೀರು ಪೂರೈಕೆಯಾಗುವುದಿಲ್ಲ. ಆದರೆ, ಕೊಳವೆ ಬಾವಿಯಿಂದ ಪೂರೈಸುವ ನೀರು ಎಂದಿನಂತೆ ಪೂರೈಕೆಯಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.