ಬ್ಯಾಡಗಿ: ಹುಬ್ಬಳ್ಳಿ ವಾಸವಿ ಮಹಲ್ನಲ್ಲಿ ಡಿ. 28 ಹಾಗೂ 29ರಂದು ಆಯೋಜಿಸಿದ್ದ ನ್ಯಾಷನಲ್ ಲೆವೆಲ್ ಪ್ರೀಮಿಯರ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಬ್ಯಾಡಗಿ ಚಿಲ್ಲೀಸ್ ಸ್ಪೋರ್ಟ್ಸ್ ಕ್ಲಬ್ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಪೂರ್ವಿಕಾ ಲಿಂಗದಹಳ್ಳಿ (5 ವರ್ಷ ವಿಭಾಗ) ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ದ್ವಿತೀಯ, ತೇಜರಾಜ ವಿ.ಎಂ. (8 ವರ್ಷ) ಕಟಾದಲ್ಲಿ ದ್ವಿತೀಯ, ಮಹಮದ್ ಮೆಹರಾಜ್ಆಲಂ ಎರೆಸೀಮೆ (9 ವರ್ಷ ಬ್ಲೂ ಬೆಲ್ಟ್) ಕಟಾ ಹಾಗೂ ಕುಮಿಟೆಯಲ್ಲಿ ದ್ವಿತೀಯ, ದಿಗಂತ ಎನ್.ಡಿ. (11 ವರ್ಷ ಗ್ರೀನ್ ಬೆಲ್ಟ್) ಕಟಾ ಹಾಗೂ ಕುಮಿಟೆಯಲ್ಲಿ ಪ್ರಥಮ ಮತ್ತು ದ್ವಿತೀಯ, ರಕ್ಷಾ ಲಿಂಗದಹಳ್ಳಿ (8 ವರ್ಷ ಪರ್ಫಲ್ ಬೆಲ್ಟ್) ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, ಅಂಕಿತಾ ಛತ್ರದ (9 ವರ್ಷ ಯೆಲೋ ಬೆಲ್ಟ್) ಕಟಾದಲ್ಲಿ ದ್ವಿತೀಯ ಸ್ಥಾನ, ಭತರಕುಮಾರ ಬಿಲ್ಲಳ್ಳಿ (11 ವರ್ಷ ವಯೋಮಾನ ಬ್ಲೂ ಬೆಲ್ಟ್) ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ ಹಾಗೂ ದ್ವಿತೀಯ, ಜಗನ್ ಜಾಲಿಹಾಳ (9 ವರ್ಷ ಬ್ಲೂ ಬೆಲ್ಟ್) ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ ಹಾಗೂ ದ್ವಿತೀಯ, ಚಿಂತನ ಸುಂಕಾಪುರ (8 ವರ್ಷ ವಯೋಮಾನ ಗ್ರೀನ್ ಬೆಲ್ಟ್) ಕಟಾದಲ್ಲಿ ದ್ವಿತೀಯ ಸ್ಥಾನ, ಅನ್ವಿತ್ ಛತ್ರದ (7 ವರ್ಷ ಯೆಲೋ ಬೆಲ್ಟ್) ಕಟಾದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಕರಾಟೆ ಪಟುಗಳಿಗೆ ಮನೀಷಾ ಕಬ್ಬೂರು, ಶಿಹಾನ್ನಾರಾಯಣ ಪೂಜಾರ ತರಬೇತಿ ನೀಡಿದ್ದಾರೆ.