ಮಂಗಳೂರು : ಬ್ಯಾರಿ ಕಲಾರಂಗ ಮಂಗಳೂರು ಇದರ ಬೆಳ್ಳಿ ಹಬ್ಬದ ಅಂಗವಾಗಿ ಸಂಘದ ಅಧ್ಯಕ್ಷ ಅಜೀಜ್ ಬೈಕಂಪಾಡಿ ಅವರು ಬರೆದ ‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕದ ಬಿಡುಗಡೆ ಸಮಾರಂಭ ಗುರುವಾರ ನಗರದ ಪತ್ರಿಕಾಭವನದಲ್ಲಿ ನಡೆಯಿತು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಪುಸ್ತಕ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಮ್ಮದ್ ಬಡ್ಡೂರು ಅವರು ಮಾತನಾಡಿ ‘ ಭಾಷೆಯಲ್ಲಿ ಮೇಲು , ಕೀಳು ಎಂಬುವುದಿಲ್ಲ. ಮಾತನಾಡುವವರ ಸಂಖ್ಯೆಯಲ್ಲಿ ಮಾತ್ರ ಹೆಚ್ಚು ಕಡಿಮೆ ಇದೆ. ಹೊರ ಜಿಲ್ಲೆಗಳಿಂದ ಬರುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬಂದಿಗೆ ‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕ ಉತ್ತಮ ಕೈ ಪಿಡಿಯಾಗಿದೆ ಎಂದರು.
ಬ್ಯಾರಿ ಕಲಾರಂಗ ಅಧ್ಯಕ್ಷ, ಲೇಖಕ ಅಜೀಜ್ ಬೈಕಂಪಾಡಿ ಅವರು ಮಾತನಾಡಿ, ಬ್ಯಾರಿ ಭಾಷೆಯನ್ನು ಇತರ ಭಾಷಿಗರು ಸುಲಭವಾಗಿ ಕಲಿಯುವಂತಾಗಲಿ ಎನ್ನುವ ಉದ್ದೇಶದಿಂದ ವಿವಿಧ ಇಲಾಖೆ, ವಿದ್ಯಾಸಂಸ್ಥೆ ಹಾಗೂ ಗ್ರಂಥಾಲಯಗಳಿಗೆ ಈ ಪುಸ್ತಕವನ್ನು ಉಚಿತವಾಗಿ ಹಂಚಲಾಗುವುದು ಎಂದರು. ಬ್ಯಾರಿ ಕಲಾರಂಗದ ಸದಸ್ಯರಾದ ಇಸ್ಮಾಯಿಲ್ ಮೂಡುಶೆಡ್ಡೆ, ಶಾಹುಲ್ ಹಮೀದ್,
ಸತೀಶ್ ಸುರತ್ಕಲ್, ಡಾ. ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು.