ಕಂಪ್ಲಿಯ ಲಿಂ.ಓದ್ಸೋ ಕರಿಬಸಯ್ಯನವರ ಪುಣ್ಯಸ್ಮರಣಾರ್ಥದ ಸಂಗೀತ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಮಾತನಾಡಿದರು. ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಎಂ.ಎಸ್.ಶಶಿಧರಶಾಸ್ತ್ರಿ, ಶರಣಬಸವರಾಜ ಹಿರೇಮಠ, ಎಸ್.ಎಸ್.ಎಂ.ಚನ್ನಬಸವರಾಜ ಇದ್ದರು. 
ಜಿಲ್ಲೆ

ಸಚ್ಚಾರಿತ್ರ್ಯದಿಂದ ನೆಮ್ಮದಿ ಬದುಕು ಸಾಧ್ಯ

ನರೇಶ್ ಕುಮಾರ್

ಕಂಪ್ಲಿ: ಹಣ, ಆಸ್ತಿ, ಅಂತಸ್ತು ಐಷಾರಾಮಿ ಜೀವನಕ್ಕೆ ಕಾರಣವೇ ಹೊರತು ನೆಮ್ಮದಿಯ ಬದುಕಿಗಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಹೇಳಿದರು.

ಇಲ್ಲಿನ ಗುರುಮಠದಲ್ಲಿ ಓದ್ಸೋ ಕರಿಬಸಯ್ಯನವರ 62ನೇ ಪುಣ್ಯಸ್ಮರಣೆ ನಿಮಿತ್ತ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸಚ್ಚಾರಿತ್ರೃದಿಂದ ಮಾತ್ರ ನೆಮ್ಮದಿಯ ಬದುಕು ಸಾಧಿಸಬಹುದು ಎನ್ನುವುದು ಓದ್ಸೋ ಕರಿಬಸಯ್ಯನವರ ನಿಲುವು ಆಗಿತ್ತು. ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಸಮೃದ್ಧಗೊಳಿಸುವುದರೊಂದಿಗೆ ಜಾತ್ಯತೀತವಾಗಿ ಸಾಂಸ್ಕೃತಿಕ, ಸಾಹಿತ್ಯಕ, ಧಾರ್ಮಿಕ ಹಿನ್ನೆಲೆಯಲ್ಲಿ ಪ್ರಬುದ್ಧಗೊಳಿಸಲು ಕರಿಬಸಯ್ಯನವರು ಶಿವಾನಂದಾಶ್ರಮ ಸ್ಥಾಪಿಸಿದರು. ಅವರ ತತ್ವ ಆದರ್ಶಗಳು ಸದಾ ಅನುಕರಣೀಯ ಎಂದರು.

ಜವುಕಿನ ವೀರೇಶಸ್ವಾಮಿ ಹಿರೇಮಠ ಅವರು ಸಂಗೀತ ಗಾಯನ, ವಚನ, ತತ್ವಪದಗಳ ಹಾಡುಗಾರಿಕೆ ನಡೆಸಿಕೊಟ್ಟರು. ಗಂಗಾವತಿಯ ಮಹ್ಮದ್ ರಿಜ್ವಾನ್ ತಬಲಾ ಸಾಥ್ ನೀಡಿದರು.

ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಎಂ.ಎಸ್.ಶಶಿಧರಶಾಸ್ತ್ರಿ, ಅಯೋಧ್ಯೆ ಶರಣಬಸವರಾಜ ಹಿರೇಮಠ, ಎಸ್.ಎಸ್.ಎಂ.ಚನ್ನಬಸವರಾಜ, ಎಚ್.ಎಂ.ಜಗದೀಶ, ಕೆ.ಎಂ.ಚಂದ್ರಶೇಖರಸ್ವಾಮಿ, ಅಕ್ಕಮಹಾದೇವಿ, ಶಿಲ್ಪಾ, ಮುಕ್ಕುಂದಿ ಶಿವಗಂಗಮ್ಮ, ವಾಲಿ ಶಕುಂತಲಾ, ಕಲ್ಗುಡಿ ರತ್ನಮ್ಮ ಇತರರಿದ್ದರು.