ಜಿಲ್ಲೆ

ದೇವರ ನಾಮಸ್ಮರಣೆಯಿಂದ ಜನ್ಮ ಸಾರ್ಥಕ

ಕುಡಚಿ: ಮನುಷ್ಯರಾಗಿ ಹುಟ್ಟಿರುವ ನಾವು ನಿತ್ಯ ದೇವರ ಸ್ಮರಣೆ ಮಾಡುತ್ತ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಕುಡಚಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿಕೆ ವಿದ್ಯಾ ಅಕ್ಕನವರು ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಿವ್ಯ ಶಕ್ತಿಯ ಭವ್ಯ ಪರಂಪರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಯಕುಮಾರ ಸನದಿ, ಶಂಕರ ಬಿ.ಕೆ, ಪ್ರಕಾಶ ಪಾಟೀಲ, ಶಿವಾಜಿ ಪಾಟೀಲ, ಸುಜಾತ, ಕಲ್ಪನಾ ಬಸಗುಂಡೆ, ದೀಪಾ ಬಸವಗೌಡ, ರೂಪಾ ಬಸಗೊಂಡೆ, ಶ್ರೀಶೈಲ ದರೂರ, ಅಶೋಕ ಸೂರ್ಯವಂಶಿ, ಪ್ರತಾಪ ತುಳಸಿಗೇರಿ, ಶೋಭಾ ಕೂಗೆ ಇದ್ದರು.

ಮಹಾಶಿವರಾತ್ರಿ: ಫೆ.10ರಂದು ಸಂಜೆ 4 ಗಂಟೆಗೆ ನಿಲಜಿ ಗ್ರಾಮದ ಶಿವಾಜಿ ನಗರದಲ್ಲಿ ರೈತ ಸಂಘ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆಯುವ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುರೇಶ ಮುಂಜೆ, ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಬಿ.ಎಸ್.ಮಂಟೂರ, ಕುಡುಚಿ ಪಿಎಸ್‌ಐ ಪ್ರೀತಂ ನಾಯಕ ಭಾಗವಹಿಸಲಿದ್ದಾರೆ.