ನಾಗರಮುನ್ನೋಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮಕ್ಕೆ ಕಬ್ಬೂರಿನ ಗೌರಿ ಶಂಕರಮಠದ ರೇವಣಸಿದ್ಧ ಸ್ವಾಮೀಜಿ ಚಾಲನೆ ನೀಡಿದರು. ಐ.ಆರ್.ಮಠಪತಿ, ಎಂ.ಬಿ.ಆಲೂರೆ, ಬಸವಣ್ಣಿ ಕುಂಬಾರ, ಸಂತೋಷ ಶಾಸ್ತ್ರಿ ಇತರರಿದ್ದರು. 
ಜಿಲ್ಲೆ

ದೇವರ ನಾಮಸ್ಮರಣೆಯಿಂದ ನೆಮ್ಮದಿ

ನಾಗರಮುನ್ನೋಳಿ: ದೇವರ ನಾಮಸ್ಮರಣೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕಬ್ಬೂರಿನ ಗೌರಿಶಂಕರ ಮಠದ ರೇವಣಸಿದ್ಧ ಸ್ವಾಮೀಜಿ ಹೇಳಿದರು.

ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ 11 ದಿನಗಳ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರು ದುಶ್ಟಟಗಳಿಂದ ದೂರವಿರಬೇಕು. ನೆಮ್ಮದಿ ಬದುಕಿಗಾಗಿ ದೇವರ ನಾಮ ಸ್ಮರಣೆ ಅವಶ್ಯ ಎಂದರು.

ಹಾರೂಗೇರಿಯ ಶರಣ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ ಮಾತನಾಡಿ, ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು. ಪ್ರವಚನ ಸಮಿತಿ ಅಧ್ಯಕ್ಷ ಎಂ.ಬಿ.ಆಲೂರೆ, ಬಸವಣ್ಣಿ ಕುಂಬಾರ, ಸಂತೋಷ ಶಾಸ್ತ್ರಿ, ವಿ.ಬಿ.ಈಟಿ, ಮಾರುತಿ ಮರ‌್ಯಾಯಿ, ಶಿವಪುತ್ರ ಮನಗೂಳಿ, ಶಂಕರ ನೇರ್ಲಿ, ಮಹಾದೇವ ಚೌಗಲಾ, ಎಂ.ಪಿ.ಕಿಲ್ಲೆದಾರ, ಬಸನಗೌಡ ಬಸಗೌಡನ್ನವರ, ರಾಜು ಪಾಟೀಲ, ಮನೋಜ ಮನಗೂಳಿ ಇತರರಿದ್ದರು. ಪ್ರಕಾಶ ಚೌಗಲಾ ನಿರೂಪಿಸಿದರು.