oplus_3276802 
ಜಿಲ್ಲೆ

ದುರ್ಗಾಪರಮೇಶ್ವರಿ ದೇವಿ ದಯೆಯಿಂದ ಭಕ್ತರ ಉದ್ಧಾರ

ಬೈಲಹೊಂಗಲ: ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದ ಡಾ.ಮಹಾಂತೇಶ ಶಾಸ್ತ್ರೀ ಅವರು ನವರಾತ್ರಿಯ ದಸರಾ ಉತ್ಸವವನ್ನು ಬಹಳ ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತ ಬಂದಿದ್ದಾರೆ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ಬಸವ ನಗರದ ಮಾತಾ ದುರ್ಗಾಪರಮೇಶ್ವರಿ ಅಮ್ಮನವರ ನವರಾತ್ರಿ ಉತ್ಸವದ ಪ್ರಯುಕ್ತ ಸೋಮವಾರ ದಸರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಿನ ಅಭಿವೃದ್ಧಿ ಉದ್ದೇಶ ಇಟ್ಟುಕೊಂಡು ದುರ್ಗಾಪರಮೇಶ್ವರಿ ತಾಯಿಗೆ ನಿತ್ಯ ಅಲಂಕಾರ, ಹೋಮ-ಹವನ ನಡೆದು ಭಕ್ತರ ಉದ್ಧಾರವಾಗುತ್ತಿದೆ ಎಂದರು.

ಪುರಸಭೆಯ ಅಧ್ಯಕ್ಷ ವಿಜಯ ಬೋಳಣ್ಣನವರ ಮಾತನಾಡಿ, ಮೈಸೂರು ಮಾದರಿಯಲ್ಲಿ ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದಿಂದ ದಸರಾ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು. ಚಂಡಿಕಾಯಾಗದ ಪೂರ್ಣಲದ ಅನುಷ್ಠಾನ ಪ್ರಾರಂಭ ಮಾಡಲಾಯಿತು. ಪ್ರೀತಿ ಪಾಟೀಲ, ವಿಜಯ ಬೋಳನ್ನವರ ದಂಪತಿಯನ್ನು ಸನ್ಮಾನಿಸಲಾಯಿತು.

ಡಾ.ಮಹಾಂತೇಶ ಆರಾದ್ರಿಮಠ ನೇತತ್ವ ವಹಿಸಿದ್ದರು. ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಜು ಕುಡಸೋಮಣ್ಣವರ, ಬಸವ ಸೌಹಾರ್ದ ಸಹಕಾರಿ ಅಧ್ಯಕ್ಷ ಶಿವಾನಂದ ಬಡ್ಡಿಮನಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಶಿವಾನಂದ ಅರಳಿ, ಪ್ರಮೋದಕುಮಾರ ವಕ್ಕುಂದಮಠ, ಪ್ರಶಾಂತ ಗುರೂಜಿ, ಬಸವರಾಜ ಶಾಸ್ತ್ರಿ, ವೀರೇಶಶಾಸ್ತ್ರಿ, ಮಹಾಂತೇಶ ಶಾಸ್ತ್ರಿ, ವಿಶ್ವನಾಥ ಶಾಸ್ತ್ರಿ, ಶ್ರೀಕಾಂತ ಶಾಸ್ತ್ರಿ, ಅಭಿಷೇಕ ಶಾಸ್ತ್ರಿ ಇದ್ದರು.