ಶಿವಾನಂದ ಮಹಾವಿದ್ಯಾಲಯದಲ್ಲಿ ಪಾಲಕ-ಶಿಕ್ಷಕರ ಸಭೆಯಲ್ಲಿ ಪ್ರೊ.ಬಿ.ಎ. ಪಾಟೀಲ ಮಾತನಾಡಿದರು. ಪ್ರೊ.ಬಿ.ಡಿ. ಧಾಮಣ್ಣವರ, ಪ್ರೊ. ಎ.ಆರ್. ಅಳಗೊಂಡಿ, ಪ್ರೊ.ಜೆ.ಕೆ. ಪಾಟೀಲ, ಪ್ರೊ.ಎಸ್.ಎಸ್. ಫಡತರೆ, ಪ್ರೊ.ಎ.ಎ. ಪಾಟೀಲ ಇತರರು ಇದ್ದರು. 
ಜಿಲ್ಲೆ

ವಿದ್ಯಾವಂತರಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ

ಪ್ರಶಾಂತ ಹೂಗಾರ

ಕಾಗವಾಡ: ಒಂದು ದೇಶವು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿಯ ನಾಗರಿಕರು ವಿದ್ಯಾವಂತರಾಗುವುದರ ಜತೆಗೆ ಒಳ್ಳೆಯ ಸಂಸ್ಕಾರವಂತ ವ್ಯಕ್ತಿಗಳೂ ಆಗಿರಬೇಕು ಎಂದು ಪ್ರೊ.ಬಿ.ಎ. ಪಾಟೀಲ ಹೇಳಿದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಾಲಕ-ಶಿಕ್ಷಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿದ್ಯಾರ್ಥಿಗಳ ಬಗ್ಗೆ ಪಾಲಕರು ಕಾಳಜಿ ಹೊಂದಬೇಕು. ಮಹಾವಿದ್ಯಾಲಯದಲ್ಲಿ ದಿನನಿತ್ಯ ನಡೆಯುವ ಪಾಠ ಪ್ರವಚನಗಳಲ್ಲಿ ತಮ್ಮ ಮಕ್ಕಳು ಸರಿಯಾಗಿ ತೊಡಗಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ವಿಚಾರಣೆ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎ. ಕರ್ಕಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಡಾ.ಎಸ್.ಪಿ. ತಳವಾರ ಪ್ರಾಸ್ತವಿಕವಾಗಿ ಮಾತನಾಡಿದರು.

ಮಾರುತಿ ಕನಾಳ ಪಾಲಕರ ಪ್ರತಿನಿಧಿಯಾಗಿ ಅನಿಸಿಕೆ ಹಂಚಿಕೊಂಡರು. ಪ್ರೊ.ಬಿ.ಡಿ. ಧಾಮಣ್ಣವರ, ಪ್ರೊ. ಎ.ಆರ್.ಅಳಗೊಂಡಿ, ತಮ್ಮಣ್ಣ ಖವಟಕೊಪ್ಪ ಇತರರು ಇದ್ದರು. ಪ್ರೊ.ಜೆ.ಕೆ. ಪಾಟೀಲ ಸ್ವಾಗತಿಸಿದರು. ಪ್ರೊ.ಎಸ್.ಎಸ್. ಫಡತರೆ ನಿರೂಪಿಸಿದರು. ಪ್ರೊ.ಎ.ಎ. ಪಾಟೀಲ ವಂದಿಸಿದರು.