ಕಟಕೋಳ: ಗ್ರಾಮೀಣ ಕ್ಷೇತ್ರದ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ನಿಯರೇ ಹೆಚ್ಚು ಅಂಕ ಪಡೆದಿದ್ದು ಸಂತಸದಾಯಕ ಸಂಗತಿ ಎಂದು ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.
ಸ್ಥಳೀಯ ಎಸ್‌ಎಸ್‌ಎಸ್‌ವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕ್ರೀಡೆ, ಎನ್‌ಎಸ್‌ಎಸ್ ಹಾಗೂ ವಿವಿಧ ಘಟಕಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನಹರಿಸಿ ಉತ್ತಮ ಅಂಕ ಗಳಿಸಬೇಕು ಎಂದರು. ಸಿಪಿಐ ವಿನಾಯಕ ಬಡಿಗೇರ ಮಾತನಾಡಿ, ನಶೆಮುಕ್ತ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿ ಪಾತ್ರ ಪ್ರಮುಖ. ದುಶ್ಚಟಕ್ಕೆ ದಾಸರಾಗಿರುವವರಿಗೆ ಮಾದಕ ವಸ್ತುಗಳ ಪರಿಣಾಮದ ಕುರಿತು ತಿಳಿಹೇಳುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮುದಕವಿ ಕಟಕೋಳ ಕುಮಾರೇಶ್ವರ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಿತಿ ಅಧ್ಯಕ್ಷ ಎ.ಸಿ.ಸುರಗ, ಉಪಾಧ್ಯಕ್ಷ ಎನ್.ಬಿ.ತೋಡಕರ, ಕಾರ್ಯದರ್ಶಿ ಸಿ.ಬಿ.ಕಳಸಪ್ಪನವರ, ನಿರ್ದೇಶಕ ಸಿ.ಎ.ದೇಸಾಯಿ, ಎಂ.ಎಂ.ಆತಾರ,
ಎಸ್.ಬಿ.ಕಳಸಪ್ಪನವರ, ಆಡಳಿತಾಧಿಕಾರಿ ಡಾ.ಪಿ.ಕೆ.ರಾಠೋಡ ಇತರರಿದ್ದರು. ಉಪನ್ಯಾಸಕ ಜಿ.ಎ್.ತೊಂಡಿಕಟ್ಟಿ, ಎಸ್.ಎಸ್.ಜಂಬಗಿ ನಿರೂಪಿಸಿದರು. ಪ್ರಾಚಾರ್ಯ ಎನ್.ಎಂ.ಜಾಲಿಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ.ವೆಂಕಟಾಪುರ ವಂದಿಸಿದರು.