filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ದಾರಿ ಸುಧಾರಣೆಯಿಂದ ಅನುಕೂಲ

ಕಾಗವಾಡ: ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.

ತಾಲೂಕಿನ ಜುಗೂಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಾವತಿ-ಕಾಗವಾಡ ಮತ್ತು ಜುಗೂಳ-ಮಿರಜ ಹಳೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಲಾ 2 ಲಕ್ಷ ರೂಪಾಯಿ ಅನುದಾನದಲ್ಲಿ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜುಗೂಳ ಗ್ರಾಮದ ಕಿರಣ ಬಾಬಾಸಾಹೇಬ ಪಾಟೀಲ (ಮುಗಳೆ) ಮೆಸ್ಕಾಂನಲ್ಲಿ ಸಹಾಯಕ ಇಂಜಿನಿಯರ್ ಆಗಿ ನಿಯುಕ್ತಿಗೊಂಡ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಕಾಕಾಸಾಹೇಬ ಪಾಟೀಲ, ಬಾಳಸಾಹೇಬ ಪಾಟೀಲ, ಬಾಬಾಸಾಹೇಬ ಪಾಟೀಲ, ರಾಜು ಕಡೋಲೆ, ವಿಲಾಸ ಕಡೋಲೆ, ಸುಭಾಷ ಪಾಟೀಲ, ರಾಜುಗೌಡ ಪಾಟೀಲ, ಕಲಗೌಡ ಪಾಟೀಲ, ಎಂ.ಬಿ.ಕೊರಬು, ಸುರೇಶ ಪಾಟೀಲ, ಬಾಬಾಸಾಹೇಬ ತಾರದಾಳೆ, ಅನಿಲ ಸುಂಕೆ, ಉಮೇಶ ಪಾಟೀಲ, ರವಿ ಕುರಣೆ, ಸಂಜಯ ಮಿಣಚೆ, ಅಕ್ಷಯ ಪಾಟೀಲ, ಜಯಪಾಲ ಯಮಕನಮರಡಿ, ಜಹಾಂಗಿರ್ ಕಲಾವಂತ, ಮಹಾದೇವ ಕಾಂಬಳೆ ಇತರರಿದ್ದರು.