ಬೋರಗಾಂವ ಪಟ್ಟಣದ ಜೈ ಗಣೇಶ ಮಲ್ಟಿಪರ್ಪಸ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಅಧ್ಯಕ್ಷರಾಗಿ ಆಯ್ಕೆಯಾದಅಭಯಕುಮಾರ ಮಗದುಮ್ಮ, ಉಪಾಧ್ಯಕ್ಷರಾಗಿ ಸಚಿನ ರೊಡ್ಡ ಅವರನ್ನು ಸತ್ಕರಿಸಲಾಯಿತು. ಎಸ್.ಪಿ.ಪೂಜಾರಿ, ಸಂತೋಷ ಹಂಚನಾಳೆ, ರಾಜಗೊಂಡ ಪಾಟೀಲ, ರೋಹಿಣಿ ಫಿರಗನವರ್ ಇತರರಿದ್ದರು. 
ಜಿಲ್ಲೆ

ಗಣ್ಯರ ಸಹಕಾರದಿಂದ ಸಂಸ್ಥೆ ಪ್ರಗತಿಯತ್ತ

ಪ್ರಶಾಂತ ಹೂಗಾರ

ಬೋರಗಾಂವ: ಪಟ್ಟಣದ ಜೈ ಗಣೇಶ ಮಲ್ಟಿಪರ್ಪಸ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಅಭಯಕುಮಾರ ಮಗದುಮ್ಮ, ಉಪಾಧ್ಯಕ್ಷರಾಗಿ ಸಚಿನ ರೊಡ್ಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಎಸ್.ಪಿ.ಪೂಜಾರಿ ಘೋಷಿಸಿದರು.

ಅಧ್ಯಕ್ಷ ಅಭಯಕುಮಾರ ಮಗದುಮ್ಮ ಮಾತನಾಡಿ, ಶಾಸಕ ಪ್ರಕಾಶ ಹುಕ್ಕೇರಿ, ಸಹಕಾರರತ್ನ ರಾವಸಾಹೇಬ ಪಾಟೀಲ, ಶಾಸಕ ಗಣೇಶ ಹುಕ್ಕೇರಿ, ಯುವ ಮುಖಂಡರಾದ ಉತ್ತಮ ಪಾಟೀಲ ಅವರ ಸಹಕಾರದಿಂದ ಸಂಸ್ಥೆ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.

ಪ್ರಧಾನ ವ್ಯವಸ್ಥಾಪಕ ಸಂತೋಷ ಹಂಚನಾಳೆ, ರಾಜಗೊಂಡ ಪಾಟೀಲ, ಅರುಣ ಬೋನೆ, ರಾವಸಾಹೇಬ ಸಾವಡೆ, ರಾಜೇಂದ್ರ ಫಿರಗನ್ನವರ, ಕುನಾಲ ವಠಾರೆ, ಮೌಲಾ ಮುಜಾವರ್, ಸಂಜಯ ಐದಮಾಳೆ, ರೋಹಿಣಿ ಫಿರಗನ್ನವರ್, ಸನ್ಮತಿ ಹಂಜೆ, ದಿಲೀಪ್ ಗೋಸಾವಿ, ಸಚಿನ ಮಹಾಜನ, ಬಾಹುಬಲಿ ಫಿರಗನ್ನವರ್, ಸಲಹಾ ಸಮಿತಿಯ ಅನಿಲ ಮಗದುಮ್ಮ, ಬಾಹುಬಲಿ ವಠಾರೆ, ಪೋಪಟ್ ಫಿರಗನ್ನವರ್, ತುಳಸಿದಾಸ್ ವಾಸವಾಡೆ, ರಾಜು ಬಳ್ಳೋಲೆ, ಬೀರು ಹಂಡೆ, ರಾಜು ಶಿಂಗೆ, ಆಕಾಶ ವಡ್ಡರ ಇದ್ದರು.