ಜಿಲ್ಲೆ

8 ಗ್ರಾಪಂ 10 ಸ್ಥಾನಗಳಿಗೆ ಉಪಚುನಾವಣೆ

ಉಡುಪಿ: ವಿವಿಧ ಕಾರಣಗಳಿಂದ ತೆರವಾಗಿರುವ ಉಡುಪಿ ಜಿಲ್ಲೆಯ 8 ಗ್ರಾಪಂಗಳ 10 ಸದಸ್ಯ ಸ್ಥಾನಗಳಿಗೆ ನ.23ಕ್ಕೆ ಉಪಚುನಾವಣೆ ನಡೆಯಲಿದೆ.
ಕಾರ್ಕಳ ತಾಲೂಕಿನ ಈದು ಗ್ರಾಪಂ 1 ಸ್ಥಾನ, ನಲ್ಲೂರು ಗ್ರಾಪಂ 1, ನಿಟ್ಟೆ ಗ್ರಾಪಂ 1, ನೀರೆ ಗ್ರಾಪಂ 3 ಸ್ಥಾನ, ಕೆರ್ವಾಶೆ ಗ್ರಾಪಂ 1, ಉಡುಪಿ ತಾಲೂಕಿನ ಬೊಮ್ಮರಬೆಟ್ಟು 1, ಕುಂದಾಪುರ ತಾಲೂಕಿನ ಅಮಾಸೆಬೈಲು 1, ಬ್ರಹ್ಮಾವರ ತಾಲೂಕಿನ ಕೋಟ ಗ್ರಾಪಂ 1 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ನ.12ಕ್ಕೆ ನಾಮಪತ್ರ ಸಲ್ಲಿಕೆ, 13ಕ್ಕೆ ನಾಮಪತ್ರ ಪರಿಶೀಲನೆ, 15ರಂದು ನಾಮಪತ್ರ ಹಿಂದೆಗೆತ, 25ಕ್ಕೆ ಮರುಮತದಾನ (ಅವಶ್ಯಕತೆ ಇದ್ದರೆ), 26ಕ್ಕೆ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.