ಜಿಲ್ಲೆ

ರಕ್ತದಾನದಿಂದ ಆರೋಗ್ಯ ವೃದ್ಧಿ

ಪ್ರಶಾಂತ ಹೂಗಾರ

ಗೋಕಾಕ: ರಕ್ತದಾನ ಜೀವ ಉಳಿಸುವ ಪವಿತ್ರ ಕಾರ್ಯವಾಗಿದ್ದು, ಯುವಪೀಳಿಗೆಯು ರಕ್ತದಾನ ಶಿಬಿರದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದು ಕೆಎಲ್‌ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.

ನಗರದ ಮಹಾದೇವಪ್ಪ ಮುನವಳ್ಳಿ ಶಾಲೆಯಲ್ಲಿ ಕೆಎಲ್‌ಇ ಅಂಗ ಸಂಸ್ಥೆಗಳು ಹಾಗೂ ರೋಟರಿ ರಕ್ತ ಭಂಡಾರದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪತ್ತಿ ಮಾಡುವುದು ಅಸಾಧ್ಯ. ಹಾಗಾಗಿ ಅದನ್ನು ದಾನಿಗಳಿಂದಲೇ ಪಡೆಯಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. 18ರಿಂದ 60 ವಯಸ್ಸಿನ ಆರೋಗ್ಯವಂತರು ರಕ್ತದಾನ ಮಾಡಬಹುದು ಎಂದರು. ಸಾಮಾಜಿಕ ಕಾರ್ಯಕರ್ತೆ ಸವಿತಾ ಪಾಟೀಲ ಉದ್ಘಾಟಿಸಿದರು. ಅವರು ದೇಹದಾನ ವಾಗ್ದಾನ ಮಾಡಿದ್ದಕ್ಕೆ ಸನ್ಮಾನಿಸಲಾಯಿತು.

ರೂಪಾ ಮುನವಳ್ಳಿ, ಸೋಮಶೇಖರ ಮಗದುಮ್ಮ, ಋಷಾಂಕ ಮುನವಳ್ಳಿ, ಡಾ.ಧರೆಪ್ಪ ಚೌಗಲಾ, ಡಾ.ಅರುಣ ವಣ್ಣೂರ, ಕೆ.ಬಿ.ಮೆವುಂಡಿಮಠ, ಡಾ.ಈರಣ್ಣ ಕಾಜಗಾರ, ನಂದಾ ಚುನಮರಿ, ಮನಿಷಾ ಮಾಂಗಳೇಕರ, ಪ್ರಶಾಂತ ಕಿವಟಿ, ಜಿ.ಎಂ. ಬಿರಾದಾರ ಇದ್ದರು.