ಜಿಲ್ಲೆ

ನಿರಂತರ ಅಧ್ಯಯನದಿಂದ ಮಾತ್ರ ಸಾಧನೆ

ಸೋಮಲಿಂಗ ತಳವಾರ

ರಾಮದುರ್ಗ: ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನದಿಂದ ಉನ್ನತ ಸಾಧನೆ ಮಾಡಿದರೆ ಮಾತ್ರ ಕಲಿತ ಕಾಲೇಜು, ಪಾಲಕರ ಕೀರ್ತಿ ಹೆಚ್ಚಲು ಸಾಧ್ಯವಾಗುತ್ತದೆ ಎಂದು ರಬಕವಿ ಜಾನಪದ ಸಾಹಿತಿ ಶ್ರೀಕಾಂತ ಕೆಂದೂಳಿ ಹೇಳಿದರು.

ಪಟ್ಟಣದ ಸುಶೀಲಾತಾಯಿ ಕುಲಗೋಡ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2024&25 ನೇ ಶೆಣಿಕ ಸಾಲಿನ ವಾರ್ಷಿಕ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಂಡು, ವಿದ್ಯಾರ್ಥಿಗಳು ಸ್ವಸ್ಥ ಸಮಾಜ ಕಟ್ಟಲು ಸಿದ್ಧರಾಗಬೇಕು ಎಂದರು.

ಅಧ್ಯತೆ ವಹಿಸಿ ಮಾತನಾಡಿದ ವಿದ್ಯಾಪ್ರಸಾರಕ ಸಮಿತಿಯ ಅಧ್ಯ ಟಿ.ದಾಮೋದರ, ಆದರ್ಶ ವ್ಯಕ್ತಿಗಳಾಗಿ ಜೀವನ ನಡೆಸಿದಲ್ಲಿ ಮಾತ್ರ ಕಲಿತ ವಿದ್ಯೆಗೆ ಬೆಲೆ ಎಂದರು.

ಹಿಂದಿನ ವರ್ಷದ ದ್ವೀತಿಯ ಪಿಯುಸಿ ಸಾಧಕರು ಹಾಗೂ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಎಂ.ಬಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಬಿ.ಆರ್​.ಪಮ್ಮಾರ ಪರಿಚಯಿಸಿದರು. ಡಾ.ಆರ್​.ಎಲ್​. ಕುಳ್ಳೂರ ಹಾಗೂ ಎಸ್​.ಆರ್​. ಗೋಲನ್ನವರ ನಿರೂಪಿಸಿದರು. ಬಿ.ವೈ. ತಳವಾರ ವಾರ್ಷಿಕ ವರದಿ ಓದಿದರು. ರಾಮವ್ವ ಪೂಜಾರ ವಂದಿಸಿದರು.