ಹುಕ್ಕೇರಿ: ಸತತ ಅಧ್ಯಯನದಿಂದ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಧ್ಯಯನ ಕೈಗೊಳ್ಳಬೇಕು ಎಂದು ಉಪನ್ಯಾಸಕ ಸಿದ್ಧಾರ್ಥ ಚೌಗಲೆ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯ ವಿ.ಎಂ.ಕತ್ತಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚಾರ್ಯ ಎಸ್.ಎಂ.ಭಂಗಿ ಮಾತನಾಡಿದರು.
ಡಾ.ವಿ.ಎಸ್.ಹೂಗಾರ, ಎಸ್.ಡಿ.ಬೆಳ್ಳಿಕಟ್ಟಿ, ಎನ್.ಎಸ್.ಪತ್ತಾರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಜೆ.ಎನ್.ಚನ್ನಿ. ಎಸ್.ಎಲ್.ಶಿಂಧೆ ಇದ್ದರು. ಪ್ರಪುಲ್‌ಕುಮಾರ ಕಳಸಪ್ಪಗೋಳ ಸ್ವಾಗತಿಸಿದರು. ಆರ್.ಎಂ.ಕಾಂಬಳೆ ಪರಿಚಯಿಸಿದರು. ಶ್ರೀನಿಧಿ ಕಬ್ಬಗೋಳ ಹಾಗೂ ಶ್ರೀನಿವಾಸ ಗುಡಸ ನಿರೂಪಿಸಿದರು. ಶ್ರೇಯಾ ಬೆಲ್ಲದ ವಂದಿಸಿದರು.