ಗೋಕಾಕದ ಉಪಕಾರಾಗಹದಲ್ಲಿ ಆಯೋಜಿಸಿದ್ದ ವಿಚಾರಣಾೀನ ಕೈದಿಗಳ ಮನಃಪರಿವರ್ತನೆ ಕಾರ್ಯಕ್ರಮವನ್ನು ಉಪ ಕಾರಾಗಹದ ಅೀಕ್ಷಕಿ ಲಕ್ಷ್ಮೀ ಹಿರೇಮಠ ಉದ್ಘಾಟಿಸಿದರು. ಮುರುಘರಾಜೇಂದ್ರ ಶ್ರೀ, ಡಾ.ಸಿ.ಕೆ.ನಾವಲಗಿ, ವಿವೇಕ ಜತ್ತಿ, ಬಸನಗೌಡ ಪಾಟೀಲ ಇದ್ದರು. 
ಜಿಲ್ಲೆ

ಮನಃಪರಿವರ್ತನೆಯಿಂದ ಜೀವನದಲ್ಲಿ ನೆಮ್ಮದಿ

ಗೋಕಾಕ: ಜೀವನದಲ್ಲಿ ಕಷ್ಟ ಬರುವುದು ಸಹಜ. ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಮುಂದೆ ಸಾಗಬೇಕು ಎಂದು ಇಲ್ಲಿನ ಶೂನ್ಯ ಸಂಪಾದನಾ ಮಠದ ಪೀಠಾಪತಿ ಮುರಘರಾಜೇಂದ್ರ ಶ್ರೀಗಳು ಹೇಳಿದರು.

ನಗರದ ಉಪಕಾರಾಗಹದಲ್ಲಿ ಶ್ರೀ ಶೂನ್ಯ ಸಂಪಾದನಾ ಮಠದಿಂದ ಶ್ರಾವಣ ಮಾಸದ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ವಿಚಾರಣಾೀನ ಕೈದಿಗಳ ಮನಃ ಪರಿವರ್ತನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಹಣೆಬರಹ ತಿದ್ದಲು ಸಾಧ್ಯವಿಲ್ಲ. ಹಾಗಾಗಿ, ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಜೀವನ ಬದಲಾಯಿಸಿಕೊಳ್ಳಬೇಕು. ಜೈಲು ಅಂದರೆ ಕೆಟ್ಟದ್ದಲ್ಲ, ಇಲ್ಲಿ ಬಂದವರು ಮನಸ್ಸು ಪರಿವರ್ತನೆ ಮಾಡಿಕೊಂಡು ಹೋಗಬೇಕು. ಮಹಾತ್ಮರ ಕಾಲದಲ್ಲೂ ಇಂತಹ ಕಹಿ ಘಟನೆ ಬಂದಿವೆ. ಆಗ ಅವರು ಮನಃಪರಿವರ್ತನೆ ಮಾಡಿಕೊಂಡು ಸಾಧಕರಾಗಿ ಸಮಾಜಕ್ಕೆ ದಾರಿ ದೀಪವಾಗಿದ್ದಾರೆ. ಆ ನಿಟ್ಟಿನಲ್ಲಿ ವಿಚಾರಣಾೀನ ಹಂತದಲ್ಲಿ ಮನಃಪರಿವರ್ತನೆ ಮಾಡಿಕೊಂಡು ಸಮಾಜ ಗೌರವಿಸುವ ನಿಟ್ಟಿನಲ್ಲಿ ಬದುಕಬೇಕು ಎಂದರು. ಡಾ.ಸಿ.ಕೆ.ನಾವಲಗಿ ಮಾತನಾಡಿ, ಶ್ರೀ ಶೂನ್ಯ ಸಂಪಾದನ ಮಠದಿಂದ ವೈಚಾರಿಕ ಕಾರ್ಯಕ್ರಮ ಹಮ್ಮಿಕೊಂಡು ಸಮಾಜ ಸುಧಾರಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು. ಉಪ ಕಾರಾಗಹದ ಅೀಕ್ಷಕಿ ಲಕ್ಷ್ಮೀ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ, ವಿವೇಕ ಜತ್ತಿ, ಬಸನಗೌಡ ಪಾಟೀಲ ಇದ್ದರು.