ಚಿಕ್ಕೋಡಿ: ನಮ್ಮ ಬದುಕಿನ ವೇಗದಲ್ಲಿ ನಾವು ಕಾಲಹರಣ ಮಾಡಿ ಜೀವನದ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ ಎಂದು ಕಷಿ ಮೋರ್ಚಾ ಮಾಜಿ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ ಹೇಳಿದರು.
ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯಯುತ ಜೀವನ ನಡೆಸಲು ಕಲೆಗಳು ಚೈತನ್ಯ ತುಂಬುತ್ತವೆ ಎಂದರು.
ಕೊಣ್ಣೂರಿನ ಜಾನಪದ ಗಾಯಕ ಭೀಮಶಿ ಹಡಪದ ಹಾಗೂ ಪೋಗತ್ಯಾನಟ್ಟಿಯ ಡೊಳ್ಳಿನಪದ ಕಲಾವಿದ ಬಸವರಾಜ ಎಲ್ಲಿಮೊನ್ನೋಳ್ಳಿ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯ ರಾಮಗೌಡ ಪಾಟೀಲ ಮಾತನಾಡಿದರು. ಬಾಬುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಭರತ ಕಲಾಚಂದ್ರ, ಗೌರವ ಜಾಗನೂರೆ, ರೇಣುಕಾ ಗಿಜಗನ್ನವರ, ಸುರೇಶ ಗಿಜಗನ್ನವರ, ಮಹಾದೇವ ಹುಲ್ಲೇನ್ನವರ, ರಾಜು ಗಿಜಗನ್ನವರ, ದುಂಡಪ್ಪ ಪಾಟೀಲ, ಈರಗೌಡ ಪಾಟೀಲ, ಬಾಳಗೌಡ ಪಾಟೀಲ, ಪ್ರಕಾಶ ಜನಮಟ್ಟಿ, ಪಂಡಿತ ಕಾಂಬಳೆ ಇತರರಿದ್ದರು.