ಜಿಲ್ಲೆ

ಬ್ರ್ಯಾಂಡ್ ಬೆಂಗಳೂರು | ಸಾರ್ವಜನಿಕ ಸಲಹೆ ಆಹ್ವಾನಿಸಿದ ಜಲಮಂಡಳಿ; ಇಲ್ಲಿದೆ ಪೂರ್ಣ ವಿವರ…

ಬೆಂಗಳೂರು: ರಾಜ್ಯ ರಾಜಧಾನಿಯನ್ನು ಅಭಿವೃದ್ಧಿಗೊಳಿಸಲು ಸರ್ಕಾರ 'ಬ್ರ್ಯಾಂಡ್ ಬೆಂಗಳೂರು' ಹೆಸರಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಜತೆಗೆ ಪರಿಣಿತರಿಂದ ಅಗತ್ಯ ಸಲಹೆಗಳನ್ನೂ ಪಡೆದುಕೊಳ್ಳುತ್ತಿದೆ. ಸದ್ಯ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ನೋಡಲ್​ ಏಜೆನ್ಸಿಯಾಗಿ ನೇಮಕ ಮಾಡಿದೆ.

ಇದೀಗ ನಗರಕ್ಕೆ ಲಭ್ಯತೆಯಿರುವ ನೀರನ್ನು ವ್ಯವಸ್ಥಿತವಾಗಿ ಸರಬರಾಜು ಮಾಡಲು ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲು ಜಲ ಮಂಡಳಿ ಕುಮಾರ ಸ್ವಾಮಿ ಲೇಔಟ್​ನಲ್ಲಿರುವ ಡಾ. ಪ್ರೇಮ ಚಂದ್ರ ಸಾಗರ್​ ಸಭಾಂಗಣದಲ್ಲಿ ಆ.10 ರಂದು ವಿಶೇಷ ಕಾರ್ಯಕ್ರಮ ಆಯೋಜಿಸಿದೆ.