ಜಿಲ್ಲೆ

ಜಲ ಮಂಡಳಿಯಿಂದ ನೀರಿನ ಅದಾಲತ್; ಯಾವಾಗ, ಎಲ್ಲಿ? ಇಲ್ಲಿದೆ ವಿವರ…

Bengaluru - General - Rama Kishan K V

ಬೆಂಗಳೂರು: ನೀರಿನ ಬಿಲ್​, ಗೃಹಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ ಸೇರಿ ವಿವಿಧ ಸಮಸ್ಯೆ ಬಗೆಹರಿಸಲು ಬೆಂಗಳೂರು ಜಲಮಂಡಳಿ ಗುರುವಾರ (ಆ.17) ನೀರಿನ ಅದಾಲತ್​ ನಡೆಸುತ್ತಿದೆ. ಜಲಮಂಡಳಿಯ ವಾಯುವ್ಯ-2, ವಾಯುವ್ಯ-4, ಕೇಂದ್ರ-1-2, ಈಶಾನ್ಯ-2, ಉತ್ತರ-1-2, ಉತ್ತರ-2-2, ದಕ್ಷಿಣ-1-2, ದಕ್ಷಿಣ-2-2, ನೈರುತ್ಯ-2, ನೈರುತ್ಯ-5, ಪೂರ್ವ-1-3, ಪೂರ್ವ-2-3 ಉಪವಿಭಾಗಗಳ ವಿವಿಧ ಸ್ಥಳಗಳಲ್ಲಿ ಬೆಳಗ್ಗೆ 9.30ರಿಂದ ಅದಾಲತ್​ ನಡೆಯಲಿದೆ. ಮಾಹಿತಿಗೆ ದೂ: 8762228888 ಸಂಪರ್ಕಿಸಿ.