ಮಾನ್ವಿ: ಹಿಂಗಾರು ಜೋಳ ಖರೀದಿಸುವಂತೆ ಆಗ್ರಹಿಸಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಮಂಗಳವಾರ ಮಾನ್ವಿ ಮತ್ತು ಸಿಂಧನೂರು ರೈತರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಹಿಂಗಾರು ಜೋಳ ಖರೀದಿಗೆ ಒತ್ತಾಯ
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಮಾತನಾಡಿ, ಹಿಂಗಾರು ಜೋಳ ಖರೀದಿಸುವಂತೆ ಸರ್ಕಾರದ ಆದೇಶ ನೀಡಿದ್ದರೂ ಜಿಲ್ಲಾಡಳಿತ ಖರೀದಿಸುತ್ತಿಲ್ಲ. ಜೋಳ ಖರೀದಿ ಪ್ರಕ್ರಿಯೆಯಲ್ಲಿ ನೋಂದಣಿ ಸಮಸ್ಯೆ, ವಾಹನದ ಜಿಪಿಎಸ್, ಲಾಗಿನ್ ಹಾಗೂ ಸರ್ವರ್ ಸಮಸ್ಯೆ ಸೇರಿ ವಿವಿಧ ಲೋಪಗಳಿಂದ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅಧಿಕಾರಿಗಳು ರೈತರ ತಾಳ್ಮೆ ಪರೀಕ್ಷಿಸದೇ ಕೂಡಲೇ ಸಮಸ್ಯೆ ಪರಿಹರಿಸಿ ಹಿಂಗಾರು ಜೋಳ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಬಳಿಕ ಮಾನ್ವಿ ಉಪ ತಹಸೀಲ್ದಾರ್ ವಿರುಪಣ್ಣ ಮತ್ತು ಸಿಂಧನೂರು ತಹಸೀಲ್ದಾರ್ ಅರುಣ್‌ಕುಮಾರ ದೇಸಾಯಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾ ಅಧ್ಯಕ್ಷ ನಾಗನಗೌಡ, ಪ್ರಮುಖರಾದ ಬಸವರಾಜ ಹಂಚಿನಾಳ, ದುರ್ಗಪ್ಪ ತಡಕಲ್, ಅಣ್ಣಪ್ಪ ಜಾಲಿಹಾಳ, ಬಸವರಾಜ ಇತರರಿದ್ದರು.