ಜಿಲ್ಲೆ

ಮಜ್ಜಿಗೆ ಕಡಿಯುವ ಮಷಿನ್​ನಿಂದ ವಿದ್ಯುತ್​ ತಗುಲಿ ವ್ಯಕ್ತಿ ಸಾವು

ರಾಣೆಬೆನ್ನೂರ: ಮಜ್ಜಿಗೆ ಕಡಿಯುವ ಮಷಿನ್​ನಿಂದ ವಿದ್ಯುತ್​ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಟನೆ ತಾಲೂಕಿನ ಮಾಳನಾಯಕನಹಳ್ಳಿಯಲ್ಲಿ ಸೋಮವಾರ ಸಂಭವಿಸಿದೆ.

ಹನುಮಂತಪ್ಪ ಕರಬಸಪ್ಪ ರಡ್ಡೇರ (40) ಮೃತ ವ್ಯಕ್ತಿ.

ಇವರು ಮನೆಯಲ್ಲಿ ಮಜ್ಜಿಗೆ ಕಡಿಯುವ ಸಲುವಾಗಿ ಮಷಿನ್​ ಆನ್​ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್​ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.