ಜಿಲ್ಲೆ

ಗುರು ಇದ್ದರೆ ಗುರಿ ತಲುಪಲು ಸಾಧ್ಯ ಉದ್ಯಮಿ ಸಂದೀಪ ಅರ್ಜುಣಗಿ ಹೇಳಿಕೆ

ಗಿರೀಶ ಸಗರ

ವಿಜಯಪುರ : ಹಿಂದೆ ಗುರು ಮುಂದೆ ಗುರಿ ಇದ್ದರೆ ಜೀವನದಲ್ಲಿ ಯಶಸ್ಸು ನಿಮ್ಮದಾಗಲಿದೆ ಎಂದು ಉದ್ಯಮಿ ಸಂದೀಪ ಅರ್ಜುಣಗಿ ಹೇಳಿದರು.

ನಗರದ ಬಿಡಿಈ ಸಂಸ್ಥೆಯ ಪಿಡಿಜೆ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಾಗ ಚತುರ್ಥಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಮಹಾ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯತೆ ವಹಿಸಿದ್ದ ಉಪನ್ಯಾಸಕ ಎಂ.ಬಿ. ಯಾದವಾಡ ಮಾತನಾಡಿ, ಸನಾತನ ಸಂಪ್ರದಾಯಗಳ ಅರಿವು ಮನಶಾಂತಿಗೆ ಪೂರಕವಾಗಿವೆ. ನಮ್ಮ ಸಂಸತಿ ಉಳಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ವಿದ್ಯಾರ್ಥಿಗಳಿಗೆ ಮೇಲಿದೆ. ವಿದ್ಯಾರ್ಥಿಗಳು ಮೊಬೈಲ್​ ಗೀಳು ಕಡಿಮೆ ಮಾಡಿ ಅಧ್ಯಯನ ಕಡೆ ಆಸಕ್ತಿ ವಹಿಸಬೇಕೆಂದು ಸಲಹೆ ನೀಡಿದರು.

ಉಪ ಪ್ರಾಚಾರ್ಯ ಎಂ.ಎ. ಆಲೂರು ಮಾತನಾಡಿ, ವಿದ್ಯಾರ್ಥಿಗಳು ಗುರುಗಳಲ್ಲಿ ಶ್ರದ್ಧೆ, ದೇವರಲ್ಲಿ ಭಕ್ತಿ ಹಾಗೂ ಪಾಲಕರಿಗೆ ವಿಧೇಯರಾಗಿ ನಡೆದುಕೊಳ್ಳುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಳೆದ ವರ್ಷದ ವಾರ್ಷಿಕ ಪರೀೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಾಜ್ಯೇಕ್ಷಾ ಪೂಜಾರ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು. ಸೃಷ್ಟಿ ಬೇನಾಳ ಸ್ವಾಗತಿಸಿದರು. ಮಹಾದೇವ ಹಡಪದ ಹಾಗೂ ನಿಂಗೊಂಡ ಬೈಚಬಾಳ ನಿರೂಪಿಸಿದರು. ಶ್ವೇತಾ ಹಿರೇಮಠ ವಂದಿಸಿದರು.ಕಾಲೇಜು ವಿಭಾಗದ ಉಪಾಧ್ಯ ಎಸ್​.ಜಿ. ಉಮರ್ಜಿ, ಪಿ.ಡಿ. ಪೂಜಾರ ಮತ್ತಿತರರಿದ್ದರು.

ವಿಜಯಪುರದ ಪಿಡಿಜೆ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಹಾ ಸರಸ್ವತಿ ಪೂಜೆ ನಡೆಯಿತು. ಸಂದೀಪ ಅರ್ಜುಣಗಿ, ಎಂ.ಬಿ. ಯಾದವಾಡ, ಎಂ.ಎ. ಆಲೂರ ಮತ್ತಿತರರಿದ್ದಾರೆ.