ಎನ್.ಆರ್.ಪುರದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ನಿವೃತ್ತ ಶಿಕ್ಷಕ ಕೆ.ಎಸ್.ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು. ಟಿ.ವಿ.ವಿಜಯನ್, ಜಿ.ಆರ್.ದಿವಾಕರ, ಕಿರಣ್, ಕಣಿವೆ ವಿನಯ, ಎಲ್.ಡಿ.ನವೀನ್ ಇತರರಿದ್ದರು.  
ಜಿಲ್ಲೆ

ಉದ್ಯಮಿ ರತನ್ ಟಾಟಾ ಸಮಾಜ ಸೇವಕ

ಎನ್.ಆರ್.ಪುರ: ಇತ್ತೀಚೆಗೆ ನಿಧನರಾದ ಉದ್ಯಮಿ ರತನ್ ಟಾಟಾ ಕರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ 1500 ಕೋಟಿ ರೂಪಾಯಿ ದಾನವಾಗಿ ನೀಡಿದ್ದರು ಎಂದು ರೋಟರಿ ಮಾಜಿ ಅಧ್ಯಕ್ಷ ಟಿ.ವಿ.ವಿಜಯನ್ ತಿಳಿಸಿದರು.

ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ನಿವೃತ್ತ ಶಿಕ್ಷಕ ಕೆ.ಎಸ್.ರಾಜಕುಮಾರ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅಗತ್ಯ ಬಿದ್ದರೆ ದೇಶಕ್ಕಾಗಿ ಸಂಪತ್ತನ್ನು ದಾನ ಮಾಡುವುದಾಗಿ ರತನ್ ಟಾಟಾ ಘೋಷಣೆ ಮಾಡಿದ್ದರು. ರತನ್ ಟಾಟಾ 150 ರಾಷ್ಟ್ರಗಳಲ್ಲಿ ಕಂಪನಿ ಬೆಳೆಸಿದ್ದರು. 14 ಲಕ್ಷ ಜನರಿಗೆ ಉದ್ಯೋಗ ನೀಡಿದ್ದರು ಎಂದರು.
ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ರತನ್ ಟಾಟಾ ಅವರಿಗೆ ಬಡವರ ಬಗ್ಗೆ ಕಾಳಜಿ ಇತ್ತು. ಉಪ್ಪಿನಿಂದ ಹಿಡಿದು ಕಬ್ಬಿಣದವರೆಗೆ ಟಾಟಾ ಕಂಪನಿ ಉತ್ಪನ್ನ ತಯಾರಿಸಿದೆ. ಕಂಪನಿಯ ಆದಾಯ ಹೆಚ್ಚುಸುವುದರ ಜತೆಗೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ ಮಾತನಾಡಿ, ಅ.26ರಂದು ರೋಟರಿ ವಲಯ ಸಾಂಸ್ಕೃತಿಕ ಸಮ್ಮೇಳನ ಎನ್.ಆರ್.ಪುರ ರೋಟರಿ ಕ್ಲಬ್ ಆತಿಥ್ಯದಲ್ಲಿ ಸಿಂಸೆಯ ಕನ್ಯಾಕುಮಾರಿ ಹಾಲ್‌ನಲ್ಲಿ ನಡೆಯಲಿದೆ. ರೋಟರಿ ವಲಯ ವ್ಯಾಪ್ತಿಯ 7 ರೋಟರಿ ಕ್ಲಬ್‌ಗಳ 200 ಸದಸ್ಯರು ಭಾಗವಹಿಸಲಿದ್ದು 7 ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ ಎಂದರು.
ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪಡೆದ ನಿವೃತ್ತ ಶಿಕ್ಷಕ ಕೆ.ಎಸ್.ರಾಜಕುಮಾರ್ ಅವರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಸ್.ರಾಜಕುಮಾರ್, ಮುಂದಿನ ದಿನಗಳಲ್ಲಿ 2 ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ರೋಟರಿ ಕಾರ್ಯದರ್ಶಿ ಮಧು ವೆಂಕಟೇಶ್, ಪಿ.ಎಸ್.ವಿದ್ಯಾನಂದಕುಮಾರ್, ಕಿರಣ್, ಕಣಿವೆ ವಿನಯ, ಎಲ್.ಡಿ.ನವೀನ್, ಎಸ್.ಎಲ್.ಲೋಕೇಶ್, ಬಿ.ಟಿ.ವಿಜಯಕುಮಾರ್, ಮನೀಶ, ಅಭಿಷೇಕ್, ಎಸ್.ಟಿ.ಗೌಡ, ಸುಂದರೇಶ್ ಇತರರಿದ್ದರು.