ಜಿಲ್ಲೆ

ಉದ್ಯಮಿ ರಮೇಶ ಪೈ ಮನೆ, ಕಚೇರಿಗಳ ಮೇಲೆ ಐಟಿ ದಾಳಿ

Belagavi

ನಿಪ್ಪಾಣಿ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ, ನಗರದ ಹೊರ ವಲಯದಲ್ಲಿರುವ ತಂಬಾಕು ಉದ್ಯಮಿ ರಮೇಶ ಪೈ ಅವರ ಮನೆ ಮತ್ತು ಕಚೇರಿಗಳ ಮೇಲೆ ಬುಧವಾರ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಐಟಿ ಅಧಿಕಾರಿಗಳು ಏಕ ಕಾಲದಲ್ಲಿ 30 ನಂ. ಬೀಡಿ ಬ್ರಾಂಡ್‌ನ ಭಾರತ ಬೀಡಿ ವರ್ಕ್ಸ್ ಕಂಪನಿಯ ಸ್ಥಳೀಯ ಶಾಖೆ ಹಾಗೂ ರಮೇಶ ಪೈ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಲವು ದಾಖಲೆ ವಶಪಡಿಸಿಕೊಂಡಿದ್ದಾರೆ.

ಅವರ ಆಪ್ತರ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.