ಜಿಲ್ಲೆ

ಅಡಕೆ, ಶುಂಠಿ ವ್ಯವಹಾರದಲ್ಲಿ ಲಾಭವಾಗಲಿಲ್ಲ ಅಂತಾ ವ್ಯಾಪಾರಿ ಆತ್ಮಹತ್ಯೆ

ಹಾನಗಲ್ಲ: ಅಡಕೆ ಹಾಗೂ ಶುಂಠಿ ವ್ಯಾಪಾರದಲ್ಲಿ ಲಾಭವಾಗಲಿಲ್ಲ ಎನ್ನುವ ಕಾರಣ ವ್ಯಾಪಾರಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಾವೇರಿ-ಶಿರಸಿ ರಸ್ತೆಯಲ್ಲಿ ಸೋಮವಾರ ಸಂಭವಿಸಿದೆ.
ಹಾವೇರಿ ಬಸವೇಶ್ವರ ನಗರದ ಬಸವರಾಜ ಶಂಕ್ರಪ್ಪ ಬಣಕಾರ (38) ಮೃತ ವ್ಯಾಪಾರಿ.
ಈತ ಅಡಕೆ ಹಾಗೂ ಶುಂಠಿ ವ್ಯಾಪಾರ ಮಾಡಿಕೊಂಡಿದ್ದ. ಆದರೆ, ಇತ್ತೀಚೆಗೆ ವ್ಯಾಪಾರದಲ್ಲಿ ಯಾವುದೆ ಲಾಭವಾಗದ ಕಾರಣ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.