ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜಿಐಟಿ) ಮತ್ತು ಟಿಐಇ ಹುಬ್ಬಳ್ಳಿ ಸಹಯೋಗದಲ್ಲಿ ಈಚೆಗೆ ಉದ್ಯಮ ಮಾಲೀಕರಿಗಾಗಿ ನೇತೃತ್ವ ಮತ್ತು ವ್ಯವಹಾರ ಯೋಜನೆ ಕಾರ್ಯಾಗಾರ ಜರುಗಿತು.
ಮುಂಬೈನ ನಿರ್ವಹಣಾ ಸಲಹೆಗಾರ ರಾಮು ಶಂಕರರಾವ್ ಅವರು ವ್ಯವಹಾರ ವೃದ್ಧಿ, ವಿಸ್ತರಿಸಬಹುದಾದ ಅವಕಾಶಗಳು ಮತ್ತು ದೃಷ್ಟಿ ಆಧಾರಿತ ನೇತೃತ್ವದ ಮಹತ್ವ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.
ಬೆಳಗಾವಂ ಆಕ್ಸಿಜನ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ವೇಂಕಟೇಶ ಪಾಟೀಲ ಉದ್ಯಮಯಾತ್ರೆ ಬಗ್ಗೆ ಪ್ರೇರಣಾತ್ಮಕವಾಗಿ ಮಾತನಾಡಿದರು. ಜಿತೋ ಬೆಳಗಾವಿ ಚಾಪ್ಟರ್ ಅಧ್ಯಕ್ಷ ಹರ್ಷವರ್ಧನ ಎ. ಇಂಚಾಲೆ ನೈತಿಕ ವ್ಯವಹಾರ ಮತ್ತು ಸಮುದಾಯ ಜಾಲದ ಬಗ್ಗೆ ಮಾತನಾಡಿದರು.
ಜಿಐಟಿ ಕಾರ್ಯನಿರ್ವಹಣಾ ಮಂಡಳಿ (ಇಂಜಿನಿಯರಿಂಗ್) ಅಧ್ಯಕ್ಷ ರಾಜೇಂದ್ರ ಬೆಳಗಾಂಕರ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕೆ ಮತ್ತು ವಿದ್ಯಾಸಂಸ್ಥೆಗಳ ನಡುವಿನ ಸಹಭಾಗಿತ್ವದ ಪಾತ್ರ ವಿವರಿಸಿದರು. ಎಂಬಿಎ ವಿಭಾಗದ ಡೀನ್ ಡಾ.ಎಚ್.ಎನ್. ಶಿವಪ್ರಸಾದ, ಜಿಐಟಿ ಪ್ರಾಚಾರ್ಯ ಡಾ.ಎಂ.ಎಸ್.ಪಾಟೀಲ ಕಾರ್ಯಕ್ರಮ ಮುನ್ನಡೆಸಿದರು. ಉದ್ಯಮ ಮಾಲೀಕರು, ಎಂಬಿಎ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಉದ್ಯಮಿಗಳು ಭಾಗವಹಿಸಿದ್ದರು.