ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಹಾಗೂ ಬೆಳಗಾವಿಯ ಬಿಎನ್ಐ ಮಿಲಿಯನೇರ್ ವತಿಯಿಂದ ನಗರದ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್ ನಲ್ಲಿ ಜೂನ್ 16ರಂದು ಬೆಳಗ್ಗೆ 9ಕ್ಕೆ ಬಿಜಿನೆಸ್ ಎಕ್ಸಪೋ-2024 ಏರ್ಪಡಿಸಲಾಗಿದೆ.
ಬಿಜ್ ಉತ್ಸವ ಅಡಿಯಲ್ಲಿ ಆಯೋಜಿಸಿರುವ ಎಕ್ಸಪೋಗಾಗಿ 34ಕ್ಕೂ ಹೆಚ್ಚು ಸ್ಟಾಲ್ ಗಳನ್ನು ತೆರೆಯಲಾಗಿದೆ. ಬಿಎನ್ಐ ಸಂಘಟನೆಯ ಸದಸ್ಯರು ಹಾಗೂ ವಿವಿಧ ಭಾಗಗಳಿಂದ ಬರುವ ಉದ್ಯಮಿಗಳು ಇಲ್ಲಿ ತಮ್ಮಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶನ ಮಾಡಬಹುದು.
ಜತೆಗೆ ಬಿಜನೆಸ್ ನೆಟ್ವರ್ಕ್ ಹಾಗೂ ಅವಕಾಶಗಳು ಸೃಷ್ಟಿಯಾಗಲಿದೆ. ಕರ್ನಾಟಕ ಕನ್ವೇಯರ್ಸ್ ಪ್ರೈವೇಟ್ ಲಿಮಿಟೆಡ್ ಎಂಡಿ ಮಹದೇವ ಕರಮರಿ ಅವರು ಬೆಳಗ್ಗೆ 11.30ಕ್ಕೆ ಎಕ್ಸಪೋ ಉದ್ಘಾಟನೆ ನೆರವೇರಿಸುವರು.