ಜಿಲ್ಲೆ

ಅಂತರರಾಷ್ಟ್ರೀಯ ಲಿಂಗಾಯತ ಯೂತ್ ವೇದಿಕೆ (ಐಎಲ್‌ವೈಎಫ್) ಯಿಂದ ಹುಬ್ಬಳ್ಳಿಯಲ್ಲಿ 23 ರಿಂದ ಬಿಜಿನೆಸ್ ಕಾನ್‌ಕ್ಲೇವ್

ಮೈಸೂರು: ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮತ್ತು ಲಾಭೋದ್ದೇಶವಿಲ್ಲದ ಸಾರ್ವಜನಿಕ, ಸಾಮಾಜಿಕ ಟ್ರಸ್ಟ್ ಆಗಿರುವ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ವೇದಿಕೆ (ಐಎಲ್‌ವೈಎಫ್) ಯಿಂದ ಫೆ.23ರಿಂದ 25ರವರೆಗೆ ಮೂರು ದಿನಗಳ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್ -2024 ಅನ್ನು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮೈಸೂರಿನ ವಿವಿಧ ಉದ್ಯಮಿಗಳು ಸಹ ಭಾಗವಹಿಸುತ್ತಿದ್ದು, ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಎಲ್ಲ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು/ ಉದ್ಯಮಶೀಲರನ್ನು/ ವೃತ್ತಿಪರರನ್ನು ಒಂದೇ ವೇದಿಕೆಯಡಿ ತರುವುದು ಮತ್ತು ಕೇಂದ್ರ ಹಾಗೂ ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿ ಪ್ರಾಯೋಗಿಕ ಮತ್ತು ದಿಟ್ಟ ಉಪಕ್ರಮಗಳನ್ನು ಅಭಿವೃದ್ಧಿಪಡಿಸುವ ಆರ್ಥಿಕ, ಕೈಗಾರಿಕಾ, ವ್ಯಾಪಾರಿಕ ಚಟುವಟಿಕೆಗಳನ್ನು ಮುಂದುವರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದು ಆಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.