ಕಳಸ: ಕಳಸದಲ್ಲಿ ಎಲ್ಲಂದರಲ್ಲಿ ಸರ್ಕಾರಿ ಬಸ್‌ಗಳ ನಿಲುಗಡೆಯಿಂದ ಸಾರ್ವಜನಿಕರಿಗೆ
ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕಳಸಕ್ಕೆ ಬಂದು
ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೆಎಸ್‌ಆರ್‌ಟಿಸಿ ಬಸ್‌ಗಳು ಕಳಸ ಪಟ್ಟಣದಲ್ಲಿ ಎಲ್ಲದಂರಲ್ಲಿ ನಿಲ್ಲಿಸುವುದು, ಟ್ರಾಫಿಕ್
ನಿಯಮ ಪಾಲನೆ ಮಾಡದಿರುವುದು, ಈ ಬಗ್ಗೆ ಪ್ರಶ್ನಿಸಿದರೆ ಸಾರ್ವಜನಿಕರೊಂದಿಗೆ
ವಾಗ್ವಾದ ನಡೆಸುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಈ
ಕುರಿತು ಶುಕ್ರವಾರದ ವಿಜಯವಾಣಿ ‘ಕಳಸದಲ್ಲಿ ಕೆಎಸ್‌ಆರ್‌ಟಿಸಿ ಚಾಲಕರು ನಿಲ್ಲಿಸಿದಲ್ಲೇ
ನಿಲ್ದಾಣ’ ಎಂಬ ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಿತ್ತು. ಸುದ್ಧಿ ಪ್ರಕಟವಾದ ಬೆನ್ನಲ್ಲೇ
ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕಳಸಕ್ಕೆ ಬಂದು ಪರಿಶೀಲನೆ ನಡೆಸಿದಿದ್ದಾರೆ.
ಕಳಸ ಗ್ರಾಪಂ ಉಪಾಧ್ಯಕ್ಷ ಭಾಸ್ಕರ್, ಸದಸ್ಯ ವೀರೇಂದ್ರ, ಶಾಸಕರ ಆಪ್ತ ಸಹಾಯಕ
ಸಂಶುದ್ಧೀನ್, ಮಾಜಿ ತಾಪಂ ಸದಸ್ಯ ಮಹಮ್ಮದ್ ರಫೀಕ್ ಕಳಸದಲ್ಲಿ ಸರ್ಕಾರಿ ಬಸ್‌ಗಳ
ಚಾಲಕರಿಂದ ಆಗುವ ಸಮಸ್ಯೆ ಹಾಗೂ ಸಮಸ್ಯೆ ಪರಿಹಾರದ ಬಗ್ಗೆ ಅಧಿಕಾರಿಗಳ ಗಮನ
ಸೆಳೆದರು.
ಕೆಎಸ್‌ಆರ್‌ಟಿಸಿ ಅಧಿಕಾರಿ ರವಿ ಮಾತನಾಡಿ, ನಾಳೆಯಿಂದಲೇ ಕಳಸ ಹಳೇ
ಬಸ್‌ನಿಲ್ದಾಣದಲ್ಲಿಯೇ ಎಲ್ಲ ಬಸ್‌ಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿ
ಶೌಚಗೃಹದ ನೀರಿನ ವ್ಯವಸ್ಥೆಗಳು ಇದೆ. ಕಳಸ ಪೊಲೀಸ್ ಠಾಣೆ ಸಮೀಪ ಬಸ್‌ಗಳ
ನಿಲುಗಡೆಗೆ ಅವಕಾಶ ಕೊಡದೇ ಈ ಹಿಂದಿನಂತೆ ಎಲ್ಲ ಬಸ್‌ಗಳು ಮಹಾವೀರ ರಸ್ತೆಯ
ಮೂಲಕವೇ ಬರುವಂತೆ ಕಳಸಕ್ಕೆ ಬರುವ ಎಲ್ಲ ಚಾಲಕರಿಗೂ ನಿರ್ದೇಶನ
ನೀಡಲಾಗುವುದು ಎಂದರು.
ಅಧಿಕಾರಿಗಳ ನಿರ್ದೇಶನದಂತೆ ಶುಕ್ರವಾರ ಸಂಜೆಯಿಂದಲೇ ಕಳಸದ ಮಹಾವೀರ ರಸ್ತೆ
ಮೂಲಕ ಕೆಲ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದವು. ಕಳಸದಲ್ಲಿ ಟ್ರಾಫಿಕ್ ರೂಲ್ಸ್
ಬ್ರೇಕ್ ಮಾಡು ಚಾಲಕರ ಮೇಲೆ ನಿರ್ದಾಕ್ಷೀಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಕಳಸ
ಪಿಎಸ್‌ಐ ಚಂದ್ರಶೇಖರ ತಿಳಿಸಿದರು.