ಸವಣೂರ: ಬಸ್ ಹತ್ತುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿದ್ದ 3.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.
ಶಮಶಾದ ಜಾವೀದ ಕನಕವಾಡ (38) ಎಂಬುವರ ಚಿನ್ನಾಭರಣ ದೋಚಿರುವುದು.
ಇವರು ಸವಣೂರಿನಿಂದ ಗದಗಗೆ ಹೋಗುವ ಸಲುವಾಗಿ ಸವಣೂರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಹತ್ತುತ್ತಿದ್ದ ಸಮಯದಲ್ಲಿ ಯಾರೋ ಖದೀಮರು ಇವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.