ಹಾವೇರಿ: ಬಸ್ ಹತ್ತುತ್ತಿದ್ದ ಮಹಿಳೆಯ ಬ್ಯಾಗ್ನಲ್ಲಿದ್ದ 2.62 ಲಕ್ಷ ರೂ. ಮೌಲ್ಯದ 67 ಗ್ರಾಂ ತೂಕದ ಚಿನ್ನಾಭರಣ ದೋಚಿದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ಸವಣೂರ ತಾಲೂಕಿನ ಮಣ್ಣಂಗಿ ಗ್ರಾಮದ ಬೀಬಿ ಅಲ್ಮಾಸ್ ಹುಸೇನಸಾಬ ವಾಲೀಕಾರ (30) ಎಂಬುವರ ಚಿನ್ನಾಭರಣ ದೋಚಿರುವುದು.
ಇವರು ನಗರದ ಬಸ್ ನಿಲ್ದಾಣದಲ್ಲಿ ಗುತ್ತಲ-ಹಡಲಗಿ ಬಸ್ ಹತ್ತುವ ಅಂಕಣದಲ್ಲಿ ನಿಂತು ಬಸ್ ಹತ್ತುತ್ತಿದ್ದ ಸಮಯದಲ್ಲಿ ಯಾರೋ ಬ್ಯಾಗ್ನಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.