ಜಿಲ್ಲೆ

ಕಳಚೆಗೆ ಮತ್ತೆ ಬಸ್ ಸಂಚಾರ ಆರಂಭ- ಶಾಸಕ ಶಿವರಾಮ ಹೆಬ್ಬಾರ್ ಅಭಯ

Gadag - Desk - Tippanna Avadoot

ಯಲ್ಲಾಪುರ: ತಾಲೂಕಿನ ಕಳಚೆಗೆ ಬಸ್ ಸಂಚಾರ ಮತ್ತೆ ಪ್ರಾರಂಭಿಸಲು ಆಗ್ರಹಿಸಿ ಗ್ರಾಮಸ್ಥರು, ಮಹಿಳೆಯರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.


ಮಳೆ ಜೋರಾಗಿರುವುದರಿಂದ ಕಾಂಕ್ರೀಟ್ ರಸ್ತೆ ಜಾರುತ್ತಿದೆ. ಕಳಚೆ ಭೂ ಕುಸಿತ ವಲಯವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ನಿಲ್ಲಿಸಲಾಗಿದ್ದು, ಹೆಬ್ಬಾರಕುಂಬ್ರಿವರೆಗೆ ಮಾತ್ರ ಬಸ್ ಸಂಚರಿಸುತ್ತಿದೆ. ಇದರಿಂದ ಕಳಚೆ ಭಾಗದ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಶೀಘ್ರ ಬಸ್ ಸಂಚಾರವನ್ನು ಮತ್ತೆ ಆರಂಭಿಸುವಂತೆ ಒತ್ತಾಯಿಸಿದರು.


ಇದಕ್ಕೆ ಸ್ಪಂದಿಸಿದ ಶಾಸಕರು, ಘಟಕ ವ್ಯವಸ್ಥಾಪಕ ಸಂತೋಷ ವೇರ್ಣೆಕರ್​ಅವರನ್ನು ಕರೆಸಿ, ಜನರ ಸಮಸ್ಯೆ ವಿವರಿಸಿ, ಬಸ್ ಸಂಚಾರ ಆರಂಭಿಸಲು ಸೂಚಿಸಿದರು.

ಗ್ರಾ.ಪಂ. ಸದಸ್ಯ ಗಜಾನನ ಭಟ್ಟ, ಪ್ರಮುಖರಾದ ಆರ್.ಪಿ. ಹೆಗಡೆ, ಸೀತಾ ಹೆಗಡೆ, ಗ್ರಾಮಸ್ಥರು, ಮಹಿಳೆಯರು ಇದ್ದರು.