ಕಂಪ್ಲಿ ಕಣವಿ ತಿಮ್ಮಲಾಪುರ ವ್ಯಾಪ್ತಿಯಲ್ಲಿ ಬಸ್ ಡಿಪೋಕ್ಕಾಗಿ ಶಾಸಕ ಜೆ.ಎನ್.ಗಣೇಶ್ ಜಾಗ ಪರಿಶೀಲಿಸಿದರು. ತಹಸೀಲ್ದಾರ್ ಎಸ್.ಶಿವರಾಜ, ಆರ್‌ಐ ವೈ.ಎಂ.ಜಗದೀಶ, ವಿಎ ಮಂಜುನಾಥ, ಪ್ರಮುಖರಾದ ಕೆ.ಷಣ್ಮುಖಪ್ಪ, ನೇಣ್ಕಿ ಗಿರಿ, ಶಾಸಕರ ಆಪ್ತ ಕಾರ್ಯದರ್ಶಿ ವಿರುಪಾಕ್ಷಿ ಇತರರಿದ್ದರು. 
ಜಿಲ್ಲೆ

ಬಸ್ ಡಿಪೋಗೆ 5ಎಕರೆ ಜಾಗ ಗುರುತು

ಕಂಪ್ಲಿ: ಬಸ್ ಡಿಪೋ ನಿರ್ಮಿಸಲು ಪಟ್ಟಣದಿಂದ 8ಕಿ.ಮೀ.ದೂರದ ತಾಲೂಕಿನ ದೇವಸಮುದ್ರ ಕ್ರಾಸ್ ಬಳಿಯ ಕಣವಿ ತಿಮ್ಮಲಾಪುರ ಗ್ರಾಮವ್ಯಾಪ್ತಿಯ ಸರ್ವೇನಂಬರ್ 254ರಲ್ಲಿ 5 ಎಕರೆ ಭೂಮಿಯನ್ನು ಶಾಸಕ, ಅಧಿಕಾರಿಗಳು ಶನಿವಾರ ಗುರುತಿಸಿದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಬಸ್ ಡಿಪೋ ಕಟ್ಟಡ ನಿರ್ಮಾಣಕ್ಕಾಗಿ 5ಎಕರೆ ಜಮೀನು ನೀಡಲಿದ್ದು, ಬಸ್ ಡಿಪೋ ಕಟ್ಟಡ ಇತರೆ ನಿರ್ಮಾಣದ ಅಂದಾಜು ಪಟ್ಟಿಯನ್ನು ಕೂಡಲೇ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕುರುಗೋಡು ಡಿಪೋ ಮ್ಯಾನೇಜರ್ ಚಂದ್ರಶೇಖರ್ ಮಾತನಾಡಿ, ಬಸ್ ಡಿಪೋಕ್ಕಾಗಿ ಅಂದಾಜು 8ಕೋಟಿ ರೂ. ಶೆಡ್, ಮ್ಯಾಕನಿಕಲ್ ಸೆಕ್ಷನ್, ಕಚೇರಿ ಕಟ್ಟಡ, ವಾಷಿಂಗ್, ಪೆಟ್ರೋಲ್ ಬಂಕ್ ಸೇರಿ ಅಗತ್ಯ ಕಟ್ಟಡ ನಿರ್ಮಿಸಬೇಕಿದೆ ಎಂದರು.