ಜಿಲ್ಲೆ

ಯುಗಾದಿ, ರಂಜಾನ್​ಗೆ ಊರಿಗೆ ಹೋಗುವವರಿಗೆ ಬಸ್ ಟಿಕೆಟ್ ದರ ಭಾರಿ ಏರಿಕೆ....Bus ticket prices hiked

ಬೆಂಗಳೂರು: ( Bus ticket prices hiked ) ಯುಗಾದಿ ಹಬ್ಬಕ್ಕೆ ಊರಿಗೆ ತೆರಳಲು  ಬಸ್ ಬುಕ್ ಮಾಡಲು ಮುಂದಾಗುತ್ತಿರುವ ಜನರು ದುಬಾರಿ ದರದಿಂದ ಹೈರಾಣುಗುತ್ತಿದ್ದಾರೆ.

ಸಾಲು-ಸಾಲು ರಜೆ ಬಂತು ಎಂದರೆ ಬಸ್​ ಗಳ ಪ್ರಯಾಣದ ದರವೂ ಹೆಚ್ಚಾಗುತ್ತದೆ. ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ವಸೂಲಿ ಶುರುವಾಗುತ್ತದೆ. ಈಗ ಮತ್ತದೇ ಚಾಳಿ ಮುಂದುವರಿಕೆಯಾಗಿದೆ. ಖಾಸಗಿ ಬಸ್ ದರ ಮೂರು ಪಟ್ಟು ಹೆಚ್ಚಿಸಲಾಗಿದೆ. ಶುಕ್ರವಾರ ರಾತ್ರಿಯಿಂದಲೇ ಜನರು ಹಬ್ಬ ಹಾಗೂ ರಜೆಗಳ ಕಾರಣ ಊರಿಗೆ ತೆರಳುತ್ತಿದ್ದಾರೆ.

ಖಾಸಗಿ ಬಸ್​ಗಳ ದರ ಏರಿಕೆಯ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ ನಟರಾಜ್ ಶರ್ಮ ಅವರನ್ನು ಪ್ರಶ್ನಿಸಿದಾಗ, ದುಪ್ಪಟ್ಟು ದರ ಏರಿಕೆ ಮಾಡಿಲ್ಲ. ಶೇ 50 ರಿಂದ 60 ರಷ್ಟು ಮಾತ್ರ ದರ ಏರಿಕೆ ಮಾಡಿದ್ದೇವೆ ಎಂದಿದ್ದಾರೆ.

ಪ್ರಸ್ತುತ ದರ=750-1000..ಹಬ್ಬದ ದರ=1200-2200

ಬೆಂಗಳೂರು-ಕಲ್ಬುರ್ಗಿ

ಪ್ರಸ್ತುತ ದರ=389-1200..ಹಬ್ಬದ ದರ=1129-5500

ಬೆಂಗಳೂರು-ಬೆಳಗಾವಿ

ಪ್ರಸ್ತುತ ದರ=475-1100..ಹಬ್ಬದ ದರ=1200-4200

ಬೆಂಗಳೂರು- ಹುಬ್ಬಳ್ಳಿ

ಪ್ರಸ್ತುತ ದರ=650-1300..ಹಬ್ಬದ ದರ=1200-4500

ಬೆಂಗಳೂರು-ಮಂಗಳೂರು

ಪ್ರಸ್ತುತ ದರ = 600-1100..ಹಬ್ಬದ ದರ =1069-5500

ಬೆಂಗಳೂರು-ಧಾರವಾಡ

ಪ್ರಸ್ತುತ ದರ=450-1300..ಹಬ್ಬದ ದರ=750-5500

ಬೆಂಗಳೂರು-ದಾವಣಗೆರೆ

ಬೆಂಗಳೂರು-ಶಿವಮೊಗ್ಗ

ಪ್ರಸ್ತುತ ದರ =500-990..ಹಬ್ಬದ ದರ =1199-1800