ಜಿಲ್ಲೆ

ಹೊಂಡಕ್ಕೆ ಇಳಿದ ಬಸ್

ವೀರೇಶ ಸೌದ್ರಿ

ಹೊನ್ನಾವರ: ತಾಲೂಕಿನ ಬಾಳೆಗದ್ದೆಯ ಸಮೀಪ ಬೆಂಗಳೂರು-ಹೊನ್ನಾವರ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಹೊಂಡಕ್ಕೆ ಇಳಿದ ಘಟನೆ ಸೋಮವಾರ ನಡೆದಿದೆ.

ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಸಾಗುತ್ತಿದ್ದಾಗ ಬಸ್ ನಿಯಂತ್ರಣ ತಪ್ಪಿದೆ. ಹೆದ್ದಾರಿ ಪಕ್ಕ ತಡೆಗೋಡೆ ಇದ್ದಿದ್ದರಿಂದ ಬಸ್ ಪಲ್ಟಿಯಾಗಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಳೆಗದ್ದೆ ತಿರುವಿನಲ್ಲಿ ಪದೇ ಪದೆ ಅಪಘಾತ ಸಂಭವಿಸುತ್ತಿವೆ. ಅಪಘಾತ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಾರ್ವಜನಿಕರು ಪದೇ ಪದೆ ಆಗ್ರಹಿಸುತ್ತಿದ್ದರೂ ಪ್ರಯೋಜನವಾಗಿಲ್ಲ.