ವಿಟ್ಲ: ಕೇಪು ಗ್ರಾಮದ ಪಡಿಬಾಗಿಲಲ್ಲಿ ಅಳಿಕೆ ಹಾಗೂ ಬೈರಿಕಟ್ಟೆ ಭಾಗಕ್ಕೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾದ ನಿರೆಲ್ ತಂಗುದಾಣವನ್ನು ಕಲಾವಿದ ಪಿ. ಕೆ. ದಾಮೋದರ್ ಲೋಕಾರ್ಪಣೆ ಮಾಡಿದರು.
ಶಾಲಾ ಮಕ್ಕಳ ಹಿತದೃಷ್ಟಿಯಿಂದ ಗೋಪಾಲ ನಾಯ್ಕ ಭೀಮಾವರ ಮತ್ತು ಉದಯ ಭಗವತಿ ಶಾಪ್ ಮುಂದಾಳತ್ವದಲ್ಲಿ ಊರ ಪರವೂರ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ನೂತನವಾಗಿ ತಂಗುದಾಣವನ್ನು ನಿರ್ಮಿಸಲಾಗಿದೆ.
ಕೇಪು ಗ್ರಾ. ಪಂ. ಸದಸ್ಯ ಜಗಜೀವನ್ ರಾಮ್ ಶೆಟ್ಟಿ, ಸಮಾಜ ಸೇವಕ ಸದಾನಂದ ಶೆಟ್ಟಿ, ಉದ್ಯಮಿ ಪ್ರಭಾಕರ ಶೆಟ್ಟಿ ದಂಬೆ ಕಾನ, ಅರ್ಚಕ ಬಾಲಕೃಷ್ಣ ಕಾರಂತ ಎರುಂಬು, ಆನಂದ ಆಚಾರ್ಯ ಪಡಿಬಾಗಿಲು, ಮಹೇಶ್ ಅಳಿಕೆ, ಮನೋಹರ್ ಪಡಿಬಾಗಿಲು, ರಾಮ ನಾಯ್ಕ, ರಘುನಾಥ ಮೈರ, ದಾಮೋದರ್ ಉಕ್ಕುಡ, ಐತಪ್ಪ ನಾಯ್ಕ, ತಿರುಮಲೇಶ್ವರ ಭೀಮಾರ, ವಿನೀಶ್ ಮತ್ತಿತರರು ಹಾಜರಿದ್ದರು. ಬಿ. ಟಿ. ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.